ಬೀದರ್ ಜಿಲ್ಲೆಯ ಬರುವ ಭಾಲ್ಕಿ ಪಟ್ಟಣದಲ್ಲಿ ಆರೋಗ್ಯದ ಬಗ್ಗೆ ಅರಿವು ರ್ಯಾಲಿಯನ್ನು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಚೌಕದಿಂದ ಭಾಲ್ಕಿ ಡಿವೈಎಸ್ಪಿಯವರಾದ ಶಿವಾನಂದ್ ಪವಡಶೆಟ್ಟಿ ಅವರು ರಿಬ್ಬಿನ್ ಕಟ್ ಮಾಡುವ ಮುಖಾಂತರ ಚಾಲನೆ ನೀಡಿದರು,ಈ ಕಾರ್ಯಕ್ರಮವನ್ನು ಸೇವಂತ್ ಡೇ ಆಡೆಂಟಿಕ್ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ವಿದ್ಯಾರ್ಥಿಗಳ ಮುಖಾಂತರ ಬಹಳ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು,ಈ ಕಾರ್ಯಕ್ರಮವು ಅಂಬೇಡ್ಕರ್ ಚೌಕದಿಂದ ಪ್ರಾರಂಭವಾಗಿ ಗಾಂಧಿ ವ್ರತ್ತದ ಮುಖಾಂತರ ಎಲ್ಲಾ ಬೀದಿಗಳಲ್ಲಿ ರ್ಯಾಲಿಯ ಮುಖಾಂತರ ಜನರಿಗೆ ದುಷ್ಟ ಚಟಗಳಿಂದ ಅಂದರೆ ಬಿಡಿ ಸಿಗರೇಟ್ ತಂಬಾಕು ಮದ್ಯಪಾನ ಇನ್ನಿತರ ವಸ್ತುಗಳಿಂದ ದೂರ ಇರಬೇಕೆಂದು ಎಲ್ಲರಲ್ಲಿ ಅರಿವು ಮೂಡಿಸಿದರು,ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ರ್ಯಾಲಿಯಲ್ಲಿ ಭಾಗವಹಿಸಿದ್ದರು.ಶಾಲೆಯ ಪ್ರಾಂಶುಪಾಲರಾದ ಶೈಲೇಶ್ ಹಾಗೂ ಉಪ ಪ್ರಾಂಶುಪಾಲರಾದ ರಮೇಶ್ ಭದ್ರೆ,ಶಾಲೆಯ ಆಡಳಿತ ಮಂಡಳಿಯ ಖಜಾಂಚಿ ಯವರಾದ ರಾಜು ಹಾಗೂ ಶಾಲೆಯ ಎಲ್ಲಾ ಸಹ ಶಿಕ್ಷಕರು ಮತ್ತು ಶಿಕ್ಷಕರ ವೃಂದದವರು ಉಪಸ್ಥಿತಿಯಲ್ಲಿ ಕ್ಷೇತ್ರ ಶಿಕ್ಷಣದ ಸಂಪನ್ಮೂಲ ವ್ಯಕ್ತಿಗಳಾದ ಅಂಬರೀಶ್ ಅವರು ಈ ಕಾರ್ಯಕ್ರಮ ರ್ಯಾಲಿಯಲ್ಲಿ ಭಾಗಿಯಾದರು.
ವರದಿ:ಸತೀಶ್ ಕುಮಾರ್ ಕಲಾ
