ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಉದ್ಬಾಳ(ಯು.) ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆದಪ್ಪ ಹಂಬಾ ಮುಖ್ಯೋಪಾಧ್ಯಾಯರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಆಶೆಆಕಾಂಕ್ಷೆಗಳನ್ನು ಹೊಂದಿ ಜೀವನವನ್ನು ಸಾಗಿಸುವುದಕ್ಕೆ ದಾಪುಗಾಲು ಇಡುತ್ತಾರೆ ಸಿಂಧನೂರಿನ ವನಸಿರಿ ಅಮರೇಗೌಡ ಮಲ್ಲಾಪೂರ ಅವರು ಯುವಕರ ತಂಡವೊಂದನ್ನು ಕಟ್ಟಿಕೊಂಡು ಹಲವಾರು ವರ್ಷಗಳಿಂದ ಪರಿಸರ ಸಂರಕ್ಷಣೆ,ಪಾಲನೆ ಪೋಷಣೆ ಮಾಡುತ್ತಿದ್ದಾರೆ ಪಕ್ಷಿಗಳ ಸಂಕುಲ ಉಳಿವಿಗಾಗಿ ಅರವಟ್ಟಿಗೆ ನಿರ್ಮಿಸಿದ್ದಾರೆ, ಸಾರ್ವಜನಿಕರಿಗೆ ಪರಿಸರದ ಬೀಜದುಂಡೆಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ,ಇವರ ಪರಿಸರ ಸೇವೆಗೆ ರಾಜ್ಯ ಪರಿಸರ ಪ್ರಶಸ್ತಿ ಕೂಡಾ ಲಭಿಸಿರುವುದು ತುಂಬಾ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಹಸಿರೇ ಉಸಿರು ಎಂಬ ನಾಟಕ ಪ್ರದರ್ಶನ ಮಾಡಲಾಯಿತು ನಂತರ ಶಾಲೆಯ ಆವರಣದಲ್ಲಿ ಸಸಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ,ಮಸ್ಕಿ ತಾಲೂಕ ಅಧ್ಯಕ್ಷ ರಾಜು ಬಳಗಾನೂರ,ಕಂಠೆಪ್ಪ ನಾಯಕ SDMCಅಧ್ಯಕ್ಷರು,ವೀರಣ್ಣ ಹಂಪರಗುಂದಿ, ಶಂಕರರಾವ್ ಕುಲಕರ್ಣಿ,ಅಜಯಕುಮಾರ ನಾಡಗೌಡ,ಕಂಟೆಪ್ಪ ನಾಯಕ,ನಾಗೇಶ ಕಡಾಮುಡಿ ಮಠ,ರಾಮಣ್ಣ ಹಂಪರಗುಂದಿ ಅಭಿನಂದನ್ ಸ್ಪೂರ್ತಿ ಧಾಮ ಮಸ್ಕಿ,ಶಿಕ್ಷಕರಾದ ವೆಂಕಟೇಶ,ಬಸವರಾಜ,ನಿವೃತ್ತಿ ಶಿಕ್ಷಕರಾದ ವೀರಣ್ಣ,ಕಂಠೆಪ್ಪ ನಾಯಕ SDMCಅಧ್ಯಕ್ಷರು, ನಾಗಯ್ಯಸ್ವಾಮಿ ಕಚಮುಡಿ ಮಠ,ಹಾಗೂ ವನಸಿರಿ ಫೌಂಡೇಶನ್ ಸದಸ್ಯರಾದ ರಮೇಶ್ ಮರಡ್ಡಿ ನಾಗರಾಜ್ ಉದ್ಬಲ್ ಶ್ರೀನಿವಾಸ ಮೈಲಾಪುರ ಹಾಗೂ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.