ಸಿಂಧನೂರು ನಗರದ ಶ್ರೀ ವಾಸವಿ ಬಾಲಕಿಯರ ಪ್ರೌಢ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಎಸ್.ಕೆ.ಪರಂಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ತುಂಬಾ ಒಳ್ಳೆಯದು,ಅವರು ಪರಿಸರವನ್ನೇ ತಮ್ಮ ಉಸಿರಾಗಿಸಿಕೊಂಡು ಶ್ರಮವಹಿಸಿ ಅಮರ ಶ್ರೀ ಆಲದ ಮರವನ್ನು ಪೋಷಣೆ ಮಾಡಿದ್ದಾರೆ ಅವರ ಪರಿಸರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ಪರಿಸರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.ಕಲ್ಯಾಣ ಕರ್ನಾಟಕವನ್ನು ಹಸಿರುಮಯವಾಗಿಸುವಲ್ಲಿ ವನಸಿರಿ ತಂಡದ ಸೇವೆ ನಿರಂತರವಾಗಿರಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪೂರ,ಸಹಕಾರ್ಯದರ್ಶಿ ರಂಜಾನ್ ಸಾಬ್,ಮಸ್ಕಿ ತಾಲೂಕ ಅಧ್ಯಕ್ಷ ರಾಜು ಬಳಗಾನೂರ,ಶಿಕ್ಷಕರಾದ ಶರಣೇಗೌಡ,ಮೋದೀನ ಸಾಬ್,ದುಗ್ಗಪ್ಪ,ವಿಜಯಲಕ್ಷ್ಮಿ, ಹನುಮಂತಪ್ಪ,ಶಿವಪ್ಪ,ಶೀಲಾವತಿ,ವನಸಿರಿ ತಂಡದ ಸದಸ್ಯರಾದ ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.