
ದಿ.28 ರಂದು ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಉದ್ಘಾಟನೆ ಹಾಗೂ”ಸಂಗೀತೋತ್ಸವ” -ಶರಣಬಸವ ಶಾಸ್ತ್ರಿಗಳು
ಬಾಗಲಕೋಟೆ/ಮುಧೋಳ :ಬಾಗಲಕೋಟೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲು ಸಿದ್ಧವಾಗಿರುವ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವು ಇದೇ ರವಿವಾರ ದಿನಾಂಕ 28ರಂದು ಸಂಭ್ರಮದಿಂದ ಸಾಂಸ್ಕೃತಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಶರಣಬಸವ ಶಾಸ್ತ್ರಿಗಳು ಹೇಳಿದರು.








