ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಧರ್ಮದ ರಕ್ಷಣೆಗಾಗಿ ದೇಶದ ನಾಲ್ಕು ಭಾಗಗಳಲ್ಲಿ ಪ್ರಮುಖ ಮಠಗಳನ್ನು ಸ್ಥಾಪಿಸುವುದರ ಮೂಲಕ ಧರ್ಮ ಜಾಗೃತಿಗಾಗಿ ಶೃಂಗೇರಿ ಶಾರದಾ ಪೀಠವು ಧರ್ಮ ಜನಜಾಗೃತಿ ನಡೆಸಲಾಗುತ್ತಿದೆ ಎಂದು ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.
ಅವರು ಶ್ರೀಮಠದಲ್ಲಿ ಶನಿವಾರದಂದು ಶ್ರೀ ಗುರು ದ್ವಾದಶಿ ಆಚರಣೆಯ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಶ್ರೀಮಠವು ಧಾರ್ಮಿಕ ಕಾರ್ಯಕ್ರಮgಐ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುವುದರ ಮೂಲಕ ಸರ್ವ ಜನಾಂಗದವರ ಪ್ರೀತಿ ಪಾತ್ರವಾಗಿದೆ. ಧರ್ಮೋ ರಕ್ಷತಿ ರಕ್ಷಿತಾಃ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ. ದ್ವಾದಶಿ ಆಚರಣೆಗೆ ಸಂಬAಧಿಸಿದAತೆ ದತ್ತಾತ್ರೇಯ ಅವತಾರಗಳಾದ ಶ್ರೀಪಾದ ಶ್ರೀ ವಲ್ಲಭರು ರಾಯಚೂರು ಜಿಲ್ಲೆಯ ಕುರುವಪುರ ಕೃಷ್ಣಾ ನದಿಯ ನಡುಗಡ್ಡಿಯಲ್ಲಿ ಹಲವು ದಶಕಗಳ ಭಕ್ತರ ಉದ್ದಾರಕ್ಕಾಗಿ ಹಲವು ಪವಾಡಗಳನ್ನು ಅನುಗ್ರಹಗಳನ್ನು ಕಲ್ಪಿಸಿ ಆಶ್ವಿಜ ಮಾಸದ ದ್ವಾದಶಿ ದಿನದಂದು ನಿಜಾಂಶ ಹೊಂದಿದ ದಿನವನ್ನು ಗುರುದ್ವಾದಶಿ ಎಂದು ದೇಶದ ನಾನಾ ದತ್ತ ಮಂದಿರಗಳಲ್ಲಿ ಶಂಕರ ಮಠಗಳಲ್ಲಿ ಆಚರಿಸುತ್ತಾರೆ ಎಂದು ತಿಳಿಸಿದರು.
ಶೃಂಗೇರಿ, ಶಂಕರ ಮಠದ ಪರಂಪರೆ ಹಾಗೂ ದತ್ತಾತ್ರೇ ಗುರುಗಳ ಅವತಾರಗಳ ಕುರಿತು ವೇದ ಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿದರು. ಇದಕ್ಕೂ ಮುಂಚೆ ದತ್ತ ಪಾದುಕೆಗಳಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟ ಅವಧಾನ ಸೇವೆ ಅಷ್ಟೋತ್ತರ ಪಾರಾಯಣ ಗುರು ಚರಿತ್ರೆ ಪಾರಾಯಣ ಶಾರದಾ ಭಜನಾ ಮಂಡಳಿ ಹಾಗೂ ಸೌಂದರ್ಯ ಲಹರಿ ಭಗಿನಿಯರ ಸಂಘ ವತಿಯಿಂದ ದತ್ತ ಭಜನೆ ಇತರೆ ಕಾರ್ಯಕ್ರಮಗಳನ್ನು ನಡೆಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಸಾಂಗತವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ವೇದಮೂರ್ತಿಗಳಾದ ಅನಂತ ಸಿದ್ಧಾಂತ, ಕಿರಣ ಜೋಶಿ, ರಾಘವೇಂದ್ರ ಅಳವಂಡಿ, ಜಗನ್ನಾಥ್ ಅಳವಂಡಿಕರ್, ಶ್ರೀಪಾದ್ ಮುಧೋಳಕರ್, ಪ್ರಹ್ಲಾದ ಮಾಸ್ಟರ್, ದತ್ತಣ್ಣ, ಶಂಕರಣ್ಣ ಹೊಸಳ್ಳಿ ಇತರರು ಉಪಸ್ಥಿತರಿದ್ದರು.
ಜಾಥಾ ಧರ್ಮ ಜಾಗೃತಿ ಗಾಗಿ ಶೃಂಗೇರಿ ಶಂಕರ ಮಠದಿಂದ ಜಾಗೃತಿ. ಗುರು ದ್ವಾದಶಿ ಆಚರಣೆಯಲ್ಲಿ ಧರ್ಮದರ್ಶಿ ನಾರಾಯಣರಾವ್ ಹೇಳಿಕೆ
ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಧರ್ಮದ ರಕ್ಷಣೆಗಾಗಿ ದೇಶದ ನಾಲ್ಕು ಭಾಗಗಳಲ್ಲಿ ಪ್ರಮುಖ ಮಠಗಳನ್ನು ಸ್ಥಾಪಿಸುವುದರ ಮೂಲಕ ಧರ್ಮ ಜಾಗೃತಿಗಾಗಿ ಶೃಂಗೇರಿ ಶಾರದಾ ಪೀಠವು ಧರ್ಮ ಜನಜಾಗೃತಿ ನಡೆಸಲಾಗುತ್ತಿದೆ ಎಂದು ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.
ಅವರು ಶ್ರೀಮಠದಲ್ಲಿ ಶನಿವಾರದಂದು ಶ್ರೀ ಗುರು ದ್ವಾದಶಿ ಆಚರಣೆಯ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಶ್ರೀಮಠವು ಧಾರ್ಮಿಕ ಕಾರ್ಯಕ್ರಮgಐ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುವುದರ ಮೂಲಕ ಸರ್ವ ಜನಾಂಗದವರ ಪ್ರೀತಿge ಪಾತ್ರವಾಗಿದೆ. ಧರ್ಮೋ ರಕ್ಷತಿ ರಕ್ಷಿತಾಃ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ. ದ್ವಾದಶಿ ಆಚರಣೆಗೆ ಸಂಬAಧಿಸಿದAತೆ ದತ್ತಾತ್ರೇಯ ಅವತಾರಗಳಾದ ಶ್ರೀಪಾದ ಶ್ರೀ ವಲ್ಲಭರು ರಾಯಚೂರು ಜಿಲ್ಲೆಯ ಕುರುವಪುರ ಕೃಷ್ಣಾ ನದಿಯ ನಡುಗಡ್ಡಿಯಲ್ಲಿ ಹಲವು ದಶಕಗಳ ಭಕ್ತರ ಉದ್ದಾರಕ್ಕಾಗಿ ಹಲವು ಪವಾಡಗಳನ್ನು ಅನುಗ್ರಹಗಳನ್ನು ಕಲ್ಪಿಸಿ ಆಶ್ವಿಜ ಮಾಸದ ದ್ವಾದಶಿ ದಿನದಂದು ನಿಜಾಂಶ ಹೊಂದಿದ ದಿನವನ್ನು ಗುರುದ್ವಾದಶಿ ಎಂದು ದೇಶದ ನಾನಾ ದತ್ತ ಮಂದಿರಗಳಲ್ಲಿ ಶಂಕರ ಮಠಗಳಲ್ಲಿ ಆಚರಿಸುತ್ತಾರೆ ಎಂದು ತಿಳಿಸಿದರು.