ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರೈತರಿಗೆ ಪ್ರಾಯೋಗಿಕ ಜೋಳ ಹಾಗೂ ತರಕಾರಿ ಬೀಜಗಳ ವಿತರಣೆ

 

ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ನಡೆದ ಕೃಷಿ ಇಲಾಖೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿಯಲ್ಲಿ ಡೆಮೋ ಪ್ರಾಯೋಗಿಕ ಜೋಳ ಹಾಗೂ ತರಕಾರಿ ಬೀಜಗಳ ಕಿರುಚೀಲ ವಿತರಣಾ ಕಾರ್ಯಕ್ರಮವನ್ನು ಕರ್ನಾಟಕ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೃಷಿ ಇಲಾಖೆ ಅಧಿಕಾರಿ ವೀರಣ್ಣ ಗಡಾದ ರೈತರಿಗೆ ಬೀಜಗಳನ್ನು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿಯಲ್ಲಿ ಡೆಮೋ ಪ್ರಾಯೋಗಿಕ ಹೊಸ ತಳಿ ಪುಲೆ ರೇವತಿ ಜೋಳದ ಬೀಜಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ ರೈತರು ಈ ಬೀಜಗಳನ್ನು ಪಡೆದುಕೊಂಡು ಬೀತನೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಹೇಳಿದರು.

ಈ ಫುಲೆ ರೇವತಿ ಜೋಳದ ಬೀಜ ಮಹಾರಾಷ್ಟ್ರ ಮೂಲದ್ದು ಪ್ರತ್ಯೇಕವಾಗಿ ನಮ್ಮ ಜಿಲ್ಲೆಯಲ್ಲಿ ಪ್ರಯೋಗ ಮಾಡಲು ಯೆರೆ ಭಾಗದ ತಿಮ್ಮಾಪೂರ ಗ್ರಾಮವನ್ನು ಆಯ್ಕೆ ಮಾಡಲಾಗಿ 30 ಜನ ರೈತರಿಗೆ ಜೋಳ ಹಾಗೂ ತರಕಾರಿ ಬೀಜಗಳನ್ನು ವಿತರಣೆ ಮಾಡಲಾಗಿದೆ ಆಸಕ್ತ ರೈತರು ಈ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಂಡು ಬೀತನೆ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಲಾನಯನ ಇಲಾಖೆ ಸಿಬ್ಬಂದಿಗಳು ವಿನಯ ಕುಮಾರ್ ಬಂಟಗೌಡ್ರ ಹಾಗೂ ಶಿವಾನಂದ ಯಡಿಯಾಪುರ ಹಾಗೂ ರೈತರಾದ ಅಶೋಕ ಕಂಕರಿ, ಶೆರಣಪ್ಪ ಜೋಗಿನ, ರಾಮಪ್ಪ ಹಚ್ಚಪ್ಪನವರ, ಶ್ರೀಕಾಂತ ಪೂಜಾರ, ರಾಮಣ್ಣ ಖಂಡ್ರಿ, ಯಲ್ಲಪ್ಪ ಮುಸಿಗೇರಿ, ಶೆರಣಪ್ಪ ಮುಲಿಮನಿ, ಮಂಜುನಾಥ ಮಾಳಗುಡರ, ಹನುಮಪ್ಪ ಸಾಲಿ, ಶೇಖಪ್ಪ ಘಂಟಿ, ಮುತ್ತಪ್ಪ ಉಳಗೇರ, ಹಾಗೂ ಇನ್ನೂ ಮುಂತಾದ ರೈತರು ಪಾಲ್ಗೊಂಡಿದ್ದರು. 

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ