ಗಂಗಾವತಿ: ವ್ಯಕ್ತಿ ಮಹರ್ಷಿ ವಾಲ್ಮೀಕಿಯಂತೆ ಶಕ್ತಿಯಾದಾಗ ಜಗತ್ತಿಗೆ ಸುಜ್ಞಾನವನ್ನ ಕೊಡುತ್ತಾನೆ ಅದೇ ರೀತಿ ಮಹರ್ಷಿ ವಾಲ್ಮೀಕಿ ಜಗತ್ತಿಗೆ ರಾಮಾಯಣವನ್ನು ಕೊಟ್ಟು ಧ್ಯಾನವನ್ನು ನೀಡಿದರು. ಅಂತವರ ಜಯಂತಿಯನ್ನು ಆಚರಿಸುವಾಗ ನಾವು ಅವರ ಸಿದ್ಧಾಂತ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕವಾಗಿ ಆಚರಿಸಬೇಕು ಹಾಗೂ ಮಲ್ಲಾಪುರ ಗ್ರಾಮದ ಸಾರ್ವಜನಿಕರು ಒಗ್ಗಟ್ಟಿನಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ೧೯೭೨ ರಿಂದಲೂ ಪ್ರತಿವರ್ಷ ಆಚರಿಸುತ್ತಾ ಬಂದಿರುವುದು ಸಂತೋಷದ ವಿಚಾರ. ಈ ಪರಂಪರೆ ಹಾಗೆ ಮುಂದುವರೆದು ಇಡೀ ನಾಡಿಗೆ ಮಾದರಿಯಾಗಲಿ ಎಂದು ದಿನಾಂಕ ೨೦.೧೦.೨೦೨೨ ರಂದು ಮಲ್ಲಾಪುರ ಗ್ರಾಮಸ್ಥರು ಆಯೋಜಿಸಿದ್ದ ವಾಲ್ಮೀಕಿ ಮಹರ್ಷಿಯ ಜಯಂತಿ ಉತ್ಸವದ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಾರ್ಟಿಯ ತಾಲೂಕ ಅಧ್ಯಕ್ಷ ಶರಣಪ್ಪ ಸಜ್ಜೀಹೊಲ ಭಾಗವಹಿಸಿ ಮಾತನಾಡಿದರು.
ಮಲ್ಲಾಪುರ ಗ್ರಾಮದ ನಾಗರಿಕರು ಉತ್ಸವದಲ್ಲಿ ಭಾಗವಹಿಸಿದ ಶರಣಪ್ಪ ಸಜ್ಜಿಹೊಲ ಇವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಭರಮಪ್ಪ ಹಳೆಕುಮಟ, ಸೋಮಶೇಖರ್ ಯಲಬುರ್ಗಾ, ಲಿಂಗಜ್ಜ ಕಲಕೇರಿ, ಯುವ ಮುಖಂಡ ಮತ್ತು ಸಾಮಾಜಿಕ ಸೇವಕ ಮಂಜುನಾಥ ಕಲಾಲ್, ಯಲ್ಲಪ್ಪ ಸೂಳೆಕಲ್, ಪರಶುರಾಮ್, ಹಂದಿಗಾಲಪ್ಪ, ಪಂಪಾಪತಿ ಎಂ. ಹನುಮಂತ ಕೆಸರಟ್ಟಿ, ಕೃಷ್ಣ ಪಟೇಲ್, ರಾಮಕೃಷ್ಣ ಕಲಕೇರಿ, ರಾಮಣ್ಣ ಸುಳೆಕಲ್, ಹನುಮೇಶ್ ಗೂಗಿಬಂಡಿ, ಹನುಮಗೌಡ, ರಾಘವೇಂದ್ರ ಕಲಕೇರಿ, ಕೊರಮ ಕ್ಯಾಂಪಿನ ವೆಂಕಟೇಶ್, ಚಿಕ್ಕರಾಂಪುರದ ಮಣಿಕಂಠ, ಕೆ. ಮಲ್ಲಾಪುರದ ವಿರುಪಣ್ಣ ಮತ್ತು ಬಸಮ್ಮ ಇತರರು ಹಾಗೂ ಗ್ರಾಮದ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಊರಿನ ಯುವಕರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ