ಗದುಗಿನ ಗಾನ ಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಆಶ್ರಮದಲ್ಲಿ ಕರ್ನಾಟಕ ರಾಜ್ಯ ಬೆಳೆ ವಿಮಾ ಹೋರಾಟ ಸಮಿತಿಯ ಕೇಂದ್ರ ಕಚೇರಿಯನ್ನು ಪರಮ ಪೂಜ್ಯ ಕಲ್ಲಯ್ಯ ಅಜ್ಜನವರು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ರಾಜ್ಯ ಬೆಳೆ ವಿಮಾ ಹೋರಾಟ ಸಮಿತಿಯನ್ನು ನಮ್ಮ ಗದುಗಿನಲ್ಲಿ ಪ್ರಾರಂಭ ಮಾಡಿದ್ದು ರೈತರಿಗೆ ಆನೆ ಬಲ ಬಂದಂತಾಗಿದೆ ಈ ಸವಿತಿಯವರು ರೈತ ಸಮಸ್ಯೆಗಳ ಬಗ್ಗೆ ಯಾವುದೇ ಹೋರಾಟ ಮಾಡಿದರು ಆ ಹೋರಾಟದಲ್ಲಿ ನಾನು ಕೂಡ ಪಾಲ್ಗೊಂಳುತೆನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯ ಕೃಷಿ ನಿರ್ದೇಶಕರಾದ ಶ್ರೀ ಮಲ್ಲಯ್ಯ ಸಿ ಕೊರನವರ ಅವರು ಮಾತನಾಡಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ರೈತರಿಗೆ ವರದಾನವಾಗಿದ್ದು ರೈತರು ಬೆಳೆ ವಿಮೆ ಹಣ ತುಂಬಿ ಸಕಾಲದಲ್ಲಿ ಬೆಳೆ ಸಮೀಕ್ಷೆ ವಿವರವನ್ನು ದಾಖಲಿಸಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯಬೇಕು ಕೃಷಿ ಇಲಾಖೆಯಿಂದ ರೈತರಿಗೆ ಬೀಜ ಗೊಬ್ಬರ ಹಾಗೂ ಕೀಟನಾಶಕಗಳನ್ನು ರೀಯಾಯತಿ ದರದಲ್ಲಿ ಪಡೆಯಬಹುದು ಎಂದು ಹೇಳಿದರು.ಸಾನಿಧ್ಯವನ್ನು ಪರಮಪುಜ್ಯ ವೀರೆಶ್ವರ ಸ್ವಾಮಿಗಳು ವಹಿಸಿದ್ದರುಅಧ್ಯಕ್ಷತೆಯನ್ನು ಫಕೀರಗೌಡ ಪಾಟೀಲ್ ರಾಜ್ಯಾಧ್ಯಕ್ಷರು ವಹಿಸಿದ್ದರು.ಮುಖ್ಯ ಅತಿಥಿಗಳು ಸಹಾಯ ನಿರ್ದೇಶಕರು ಕೃಷಿ ಇಲಾಖೆ, ಪಿ ರವಿ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಶೈಲೇಂದ್ರ ಬಿರಾದಾರ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ,ವಿಷೇಶ ಆಮಂತ್ರಿತರು, ನಿಂಗನಗೌಡ ಹಿರೇಮನಿ ಪಾಟೀಲ್, ಪರಮೇಶ್ವರಪ್ಪ ಜಂತ್ಲಿ ವೆಂಕಟೇಶ ಇಮರಾಪೂರ, ಫಕೀರಪ್ಪ ಜಡಿ, ಚಂದ್ರಶೇಖರ ರಾಜೂರ, ಉಮೇಶ ಲಿಂಗರಡ್ಡಿ, ವಿಕಾಸ ಸೊಪ್ಪಿನ, ಶಶಿಧರ ದುರ್ಗದ, ಸತೀಶ ಗಿಡ್ಡಹನಮಣ್ಣವರ,ಭರಮಪ್ಪ ಅಕ್ಕಮ್ಮ ನವರ, ಯಲ್ಲಪ್ಪ ಎಚ್ ಬಾಬರಿ, ಈರಯ್ಯ ಹೊಸಮಠ, ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.