-ಬಸವರಾಜ ಮ್ಯಾಗಳಮನಿ
ಗಂಗಾವತಿ: ಇತ್ತೀಚೆಗೆ ಸಚಿವ ಸಿ.ಟಿ ರವಿ ಹಾಗೂ ವಿಜಯಪುರ ಕ್ಷೇತ್ರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಇವರುಗಳು ಹಿಂದೂ ಧರ್ಮದ ಕೆಲವು ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ನೋಡಿದರೆ, ಇವರು ಹಿಂದೂಗಳೇ? ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಕೊಪ್ಪಳ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ಟೀಕಿಸಿದರು.
ಸಚಿವ ಸಿ.ಟಿ ರವಿ ಯವರು ರಜಪೂತ್ ಸಮುದಾಯದ ಬಗ್ಗೆ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಣಜಿಗ ಸಮುದಾಯದ ಬಗ್ಗೆ ಹೀನವಾಗಿ ಮಾತನಾಡಿ, ಸಮುದಾಯದ ಗೌರವಕ್ಕೆ ಧಕ್ಕೆಯುಂಟಾಗುವAತೆ ಮಾತನಾಡಿದ್ದು ತೀವ್ರ ಖಂಡನೀಯವಾಗಿದೆ. ಇವರುಗಳು ಹಿಂದೂ ಧರ್ಮದವರಾಗಿದ್ದರೂ, ಹಿಂದೂ ಧರ್ಮದ ಕೆಲವು ಸಮುದಾಯಗಳ ಬಗ್ಗೆ ಮಾತನಾಡಿ, ಹಿಂದೂ ಧರ್ಮದ ಗೌರವಕ್ಕೆ ಧಕ್ಕಬರುವಂತೆ ಮಾಡಿದ್ದಾರೆ. ಆದಕಾರಣ ಕೂಡಲೇ ಇವರುಗಳು ರಜಪೂತ ಹಾಗೂ ಬಣಜಿಗ ಸಮುದಾಯದವರಿಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ರಾಜ್ಯ ಸರ್ಕಾರ ಕೂಡಲೇ ಇವರಿಬ್ಬರಿಂದ ರಾಜೀನಾಮೆ ಪಡೆದು ಶಾಸಕ ಸ್ಥಾನವನ್ನು ರದ್ದುಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.