ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಈ ಬಾರಿಯ ರಾಜ್ಯೋತ್ಸವ ಏಕೆ ವಿಶೇಷ ?

ಭಾರತ ಒಂದು ಒಕ್ಕೂಟ ರಾಷ್ಟ್ರ ವಿವಿಧ ಭಾಷೆ,ಸಂಸ್ಕೃತಿ,ಸಂಪ್ರದಾಯ ಇರುವಂತಹ ರಾಜ್ಯಗಳ ಒಕ್ಕೂಟ.ಯಾವುದೇ ಒಂದು ಭಾಷೆಯನ್ನು ಇಲ್ಲಿ ಹೇರಲಿಕ್ಕೆ ಅವಕಾಶವಿಲ್ಲ. ಕನ್ನಡವನ್ನು ರಕ್ಷಣೆ ಮಾಡುವುದು ಮಾತ್ರವಲ್ಲ,ಕನ್ನಡ ಬೆಳೆಸಲಿಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ,ರಾಜ್ಯದ ನಮ್ಮ ಜನತೆಯೂ ಬದ್ದವಾಗಿದ್ದಾರೆ.ಆದ್ದರಿಂದ ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ.
ಯಾವ ಕಾರಣಕ್ಕೂ ಈ ವಿಷಯದಲ್ಲಿ ರಾಜಿ ಇಲ್ಲ. ನಮ್ಮ ನೆಲ,ಜಲ,ಭಾಷೆ,ಈ ವಿಚಾರದಲ್ಲಿ ರಾಜಕೀಯ ಮೀರಿ ನಾವು ಯಾವಾಗಲೂ ನಿರ್ಣಯ ತೆಗೆದುಕೊಂಡಿದ್ದೇವೆ.ನಾವು ಕನ್ನಡವನ್ನ ಅಗ್ರಗಣ್ಯ ಭಾಷೆಯನ್ನಾಗಿಯೇ ಬಳಕೆ ಮಾಡುತ್ತಿದ್ದೇವೆ. ಅದನ್ನು ನಾವು ಹೆಚ್ಚು ಮಾಡಲಿಕ್ಕೆ ಕಾನೂನನ್ನೇ ತರುತ್ತಿದ್ದೇವೆ.ಇದೇ ವಿಧಾನಸಭೆಯಲ್ಲಿ ಕನ್ನಡವನ್ನ ಕಾನೂನುತ್ಮಾಕವಾಗಿ ಕಡ್ಡಾಯ ಮಾಡುವಂತಹದ್ದು ಪ್ರಥಮ ಬಾರಿಗೆ ರಾಜ್ಯದಲ್ಲಿ ನಾವು ತರುತ್ತಿದ್ದೇವೆ. ಇದುವರೆಗೂ ನಾವು ಕನ್ನಡ ಕಡ್ಡಾಯ ಅಂತ ಮಾತನಾಡುತ್ತಿದ್ದೆವು ಆದರೆ ಅದಕ್ಕೆ ಕಾನೂನಿನ ರೂಪ ಇರಲಿಲ್ಲ.ಇನ್ನು ಮುಂದೆ ಕನ್ನಡಿಗರಿಗೆ ಕನಾರ್ಟಕಕ್ಕೆ ರಕ್ಷಣೆ ಇರುತ್ತದೆ.
ಇವು ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಕನ್ನಡ ಕುರಿತ ಅಬ್ಬರದ ಮಾತುಗಳು.
ಭಾರತ ಅಮೃತ ಮಹೋತ್ಸವ ಸ್ವಾತಂತ್ರ್ಯ ಸಂಭ್ರಮದಲ್ಲಿ ಹರ್ ಘರ್ ತಿರಂಗಾ ಮೂಲಕ ಪ್ರತಿ ಮನೆ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವಂತೆ ಕರೆ ನೀಡಿತ್ತು.ಆ ಮೂಲಕ ಈ ಕಾರ್ಯಕ್ರಮ ಕೂಡಾ ರಾಷ್ಟ್ರಾದ್ಯಂತ ಯಶಸ್ವಿಯಾಯಿತು.ಪ್ರತಿಯೊಬ್ಬ ಭಾರತೀಯನ ಮನೆ ಮನದಲ್ಲೂ ರಾಷ್ಟ್ರಪ್ರೇಮ ಮೆರೆಯುವ ಸಂದರ್ಭಕ್ಕೆ ಸಾಕ್ಷಿಯಾಯಿತು.ಈ ನಿಟ್ಟಿನಲ್ಲಿ ಈಗ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರತಿ ಮನೆ ಮನೆಯಲ್ಲೂ ಕನ್ನಡ ಭಾವುಟ ಹಾರಿಸುವ ಕುರಿತು ಚರ್ಚೆಯಾಗುತ್ತಿದೆ.ಇದಕ್ಕೆ ಪೂರಕವೆಂಬಂತೆ ಈ ಬಾರಿ ಕನ್ನಡ ರಾಜ್ಯೋತ್ಸವದಂದು ಪ್ರತಿ ಮನೆಗಳ ಮೇಲೆ ಕನ್ನಡಧ್ವಜ ಹಾರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಕರೆ ನೀಡಿದ್ದಾರೆ.ಪ್ರತಿ ಮನೆ ಮನೆಯ ಮೇಲೂ ಕನ್ನಡ ಭಾವುಟ ಹಾರಿಸುವ ಮೂಲಕ ಈ ಬಾರಿ ಕನ್ನಡ ಪ್ರೇಮ ಮೆರೆಯೋಣ.ಅದರೊಂದಿಗೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನೂ ನಮ್ಮ ಭಾಷೆ,ಸಂಸ್ಕೃತಿ, ಪರಂಪರೆಯ ಧ್ಯೋತಕವಾದ ಕನ್ನಡದ ಧ್ವಜವನ್ನು ಹಾರಿಸಿ ಎಲ್ಲರ ಮನ-ಮನೆಯಲ್ಲೂ ಕನ್ನಡತನ ಮೆರೆಯಲಿ ಎಂದು ಡಾ. ಮಹೇಶ ಜೋಶಿ ಹೇಳಿದ್ದಾರೆ.
ಇದರ ಜೊತೆಗೆ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠವಾಗಿ ಆಚರಿಸಲು ಕರ್ನಾಟಕ ಸರ್ಕಾರ ಕೂಡಾ ಮುಂದಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಈಗಾಗಲೇ ಉನ್ನತ ಮಟ್ಟದ ಸಭೆಗಳನ್ನು ನಡೆಸಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.ಅಕ್ಟೋಬರ್ ೨೮ ರಂದು ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ಐತಿಹಾಸಿಕ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ಹಾಕಿಕೊಂಡಿತ್ತು.ರಾಜ್ಯ,ದೇಶ, ವಿದೇಶಗಳಲ್ಲಿರುವ ಕನ್ನಡಿಗರಿಂದ ಏಕಕಾಲದಲ್ಲಿ ಗಾಯನ ನಡೆಸುವ ಕಾರ್ಯಕ್ರಮವನ್ನು ಹಾಕಿಕೊಂಡಿತ್ತು ಇದರ ಜೊತೆಗೆ ವಿದ್ಯಾರ್ಥಿಗಳಿಂದಲೂ ಕೋಟಿ ಕಂಠ ಗಾಯನ ಮಾಡಿಸಿತು.ಅಕ್ಟೋಬರ್ ೨೮ ರಂದು ನಡೆದ ಕೋಟಿ ಕಂಠ ಗಾಯನ ೧ ಕೋಟಿ ಜನ ಹಾಡು ಹಾಡಿದರು.ಅಕ್ಟೋಬರ್ ೨೮ ರಂದು ಬೆಳಗ್ಗೆ ೧೧ ಗಂಟೆಗೆ ೧೦ ಸಾವಿರ ಕಡೆಗಳಲ್ಲಿ ಕನ್ನಡದ ೬ ಹಾಡುಗಳನ್ನು ಹಾಡಲಾಯಿತು
ಇದರ ಬೆನ್ನಲ್ಲೇ ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ನೀಡಲು ರಾಜ್ಯ ಜೆಡಿಎಸ್ ಪಕ್ಷವೂ ಸಜ್ಜಾಗಿದೆ. ರಾಜ್ಯಾದ್ಯಂತ ನವೆಂಬರ್ ೧ರಿಂದ ಮನೆ ಮನೆಗೆ ಕನ್ನಡ ಬಾವುಟ ಎಂಬ ಅಭಿಯಾನ ಮಾಡಲು ಜೆಡಿಎಸ್ ಮುಂದಾಗಿದ್ದು ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.ನವೆಂಬರ್ ೧ರಿಂದ ೧೫ ದಿನಗಳ ಕಾಲ ಈ ಅಭಿಯಾನ ನಡೆಯಲಿದ್ದು ಜನರಿಗೆ ಬಾವುಟ ನೀಡಲು ಹೆಚ್ಡಿಕೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಉಳಿಸಿ ಬಳಸಿ ಎನ್ನುವ ಪರಿಸ್ಥಿತಿ ಈಗ ನಮ್ಮಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದೆ ಅದರಾಚೆಗೂ ಭಾಷೆಯನ್ನು ಬೆಳೆಸಬೇಕಾದ ಹಾಗೂ ಬಳಸಬೇಕಾದ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನದ್ದು. ಇಂತಹ ವ್ಯವಸ್ಥೆಯಲ್ಲಿ ಸಿಕ್ಕಿರುವರು ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ.ಪ್ರಾರಂಭದಲ್ಲಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದು.ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ.
ಕನ್ನಡ ಭಾಷೆಯ ಏಳ್ಗೆಗಾಗಿ ಸರ್ಕಾರ,ಹತ್ತು ಹಲವಾರು ಸಂಘಟನೆಗಳು,ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುವರು.ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಕನ್ನಡ ರಾಜ್ಯೋತ್ಸವ,ಸಾಹಿತ್ಯ ಸಮ್ಮೆಳನ,ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ.ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ.ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು,ನಿಯಮದಿಂದ, ಬಲವಂತದಿಂದ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವುದಿಲ್ಲ.ಮುಖ್ಯವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಯಲ್ಲಿ ಆಗಿರುವುದು ಆದ್ದರಿಂದ ಮಾಧ್ಯಮ ಮತ್ತು ಶಾಲೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ.
ನಮ್ಮ ಶಾಲೆ,ಗ್ರಂಥಾಲಯ ಕನ್ನಡ ಭಾಷೆಯಲ್ಲಿಯೇ ಜಗತ್ತಿನ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರಗಳಾಗುವಂತೆ ಗಮನಹರಿಸಬೇಕಾಗಿದೆ. ನಮ್ಮ ಪ್ರತಿ ಬಾರಿಯ ರಾಜ್ಯೋತ್ಸವಕ್ಕೆ ಪ್ರತಿ ಶಾಲೆಗೂ ಅನೇಕ ಪುಸ್ತಕಗಳು ಸಿಗುವಂತ ವ್ಯವಸ್ಥೆ ಆಗಬೇಕಾಗಿದೆ.ಮಾದ್ಯಮಗಳು ಕೂಡಾ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು.ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ.
ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು.ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು,ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಹ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ.ನಾವು ‘ರಾಷ್ಟ್ರಕವಿ ಕುವೆಂಪು’ ಆಶಿಸಿರುವಂತೆ ವಿಶ್ವಮಾನವರಾಗಿ ಕನ್ನಡ ಉಳಿಸಿ ಬೆಳಸುವ ಕರ‍್ಯವನ್ನು ಮಾಡಬೇಕಾಗಿದೆ.
ನಮಗೆ ಅವಕಾಶ ಇರುವ ಸಂದರ್ಭಗಳಲ್ಲಿ ಕನ್ನಡ ಬಳಸಿದರೆ ಸಾಕು ಭಾಷೆಯನ್ನು ಬೆಳೆಸಿ ಉಳಿಸಿ ಎನ್ನುವ ಪ್ರಮೇಯವೇ ಇರುವುದಿಲ್ಲ ನಮಗೆ ಅವಕಾಶವಿದ್ದು ನಮ್ಮ ಭಾಷೆಯನ್ನು ಬಳಸಿಲ್ಲವೆಂದರೆ ಅದು ನಾವು ಭಾಷೆಗೆ ತೋರುವ ಅಗೌರವ ಎಂದರೆ ತಪ್ಪಾಗಲಾರದು ಯಾವುದೋ ಭಾಷೆಯ ವ್ಯಾಮೋಹಕ್ಕೋ ಅಥವಾ ಪ್ರತಿಷ್ಠೆಗೋ ಬಿದ್ದು ನಮ್ಮ ಭಾಷೆಯನ್ನು ಬಲಿ ಕೊಡುವುದು ಎಷ್ಟು ಸರಿ? ನಮ್ಮ ಭಾಷೆಯನ್ನು ನಾವು ಹೆಮ್ಮೆಯಿಂದ ಬಳಸಿದರೆ ಅಷ್ಟೇ ಸಾಕು ಭಾಷೆಯನ್ನು ಯಾರು ಬೆಳೆಸಬೇಕಾದ ಅನಿವಾರ್ಯತೆ ಅಥವಾ ಬಳಸಿ,ಬೆಳೆಸಿ ಎನ್ನುವ ಅವಶ್ಯಕತೆ ಇರುವುದಿಲ್ಲ. ಹೀಗೆ ಈ ಬಾರಿ ಕನ್ನಡ ರಾಜ್ಯೋತ್ಸವವೂ ವಿಶೇಷವಾಗಬಹುದು ಎಲ್ಲಾ ಕನ್ನಡಿಗರ ಸಹಕಾರದೊಂದಿಗೆ…!
-ಮಂಜುನಾಥ.ಎಂ.
ಚಿಕ್ಕಬಳ್ಳಾಪುರ
೭೮೯೨೭೪೧೯೨೦

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

8 Responses

    1. ಧನ್ಯವಾದಗಳು ನಿಮ್ಮ ಸಹಕಾರ ಸದಾ ಹೀಗೆ ಇರಲಿ

    2. ಧನ್ಯವಾದಗಳು ಯಸೂಫ್ ಅವರೇ

Leave a Reply

Your email address will not be published. Required fields are marked *

ಇದನ್ನೂ ಓದಿ