ಜೇವರ್ಗಿ: ಪಟ್ಟಣದ ದತ್ತ ನಗರ ಬಡಾವಣೆಯಲ್ಲಿ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಕನ್ನಡ ರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.ಶಾಲೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಎಸ್ ಪಾಟೀಲ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕನ್ನಡ ರಾಜ್ಯೋತ್ಸವದ ಪೂರ್ವ ಇತಿಹಾಸ,ಹಿನ್ನೆಲೆ,ಕನ್ನಡಕಾಗಿ ಶ್ರಮಿಸಿದ ಮಹನೀಯರನ್ನು ಮತ್ತು ಕನ್ನಡಕ್ಕೆ ಕೊಡುಗೆ ಕೊಟ್ಟ ಮಹಾನ ವ್ಯಕ್ತಿಗಳ ಬಗ್ಗೆ ಸವಿವರವಾಗಿ ತಮ್ಮ ಭಾಷಣದ ಮೂಲಕ ನುಡಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆಯೊಂದಿಗೆ ಪ್ರಾರಂಭಿಸಿ ಹಾಗೂ ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕರಿಂದ ಭಾಷಣದ ಮೂಲಕ ಸುಧೀರ್ಘ ಕನ್ನಡದ ಇತಿಹಾಸವನ್ನು ಮೆಲುಕು ಹಾಕಲಾಯಿತು.ಈ ಕಾರ್ಯಕ್ರಮದಲ್ಲಿ ಶಿಕ್ಷಕ/ಕೀಯರಾದ ಪ್ರತಾಫ್ ಪವಾರ,ದೊಡ್ಡಪ ಕೋಣಿನ್,ಭುವನೇಶ್ವರಿ ಹಿರೇಗೌಡರ್,ಸಿದ್ದಮ್ಮ ಉಳ್ಳೆ,ಲಕ್ಷ್ಮೀ ನಿಡಗುಂದಿ,ದೀಪಾ ಪಾಟೀಲ್,ಮಂಜುಳಾ ಇಜೇರಿ,ರಾಜೇಶ್ವರಿ ಪಾಟೀಲ್,ಈರಮ್ಮ ಹಿರೇಗೌಡರ್ ಮತ್ತು ಕಾರ್ಯಕ್ರಮವು ಸಾಹೇಬಗೌಡ ಮುರಡಿ ದೈಹಿಕ ಶಿಕ್ಷಕರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ವರದಿ: ಸಿ ಎಸ್ ಪಾಟೀಲ್ ಗುಡೂರ ಎಸ್ ಎನ್.