ಹನೂರು :ಕ್ಷೇತ್ರ ವ್ಯಾಪ್ತಿಯ ಜೀರಿಗೆ ಗದ್ದೆ ಗ್ರಾಮದಲ್ಲಿ ಜನಿಸಿ ಸುತ್ತಮುತ್ತಲಿನ ಗ್ರಾಮದ ಜನರ ಕಷ್ಟ ಸುಖದಲ್ಲಿ ಸದಾಕಾಲವೂ ಸ್ಪಂದಿಸಿದ ಮಾದಮ್ಮರನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನಮಗೆ ಸಂತಸ ತಂದಿದೆ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು .
ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಸರಳವಾಗಿ ತಾಲ್ಲೂಕು ಆಡಳಿತ ಮಂಡಳಿಯವರಿಂದ ಮಾದಮ್ಮನವರಿಗೆ ಅಧಿಕಾರಿಗಳ ಜೊತೆಯಲ್ಲಿ ಸನ್ಮಾನ ಮಾಡಿ ಮಾತನಾಡಿದ ಅವರು ಹಳ್ಳಿಗಳಲ್ಲಿ ಇಂದು ಸಹ ಹಲವಾರು ನಾಟಿ ವೈದ್ಯರಿದ್ದು ತೆರೆಮರೆಯಲ್ಲಿದ್ದಾರೆ ಈಕೆಯು ನಾಟಿ ವೈದ್ಯ ವೃತ್ತಿಯ ಜೊತೆಯಲ್ಲಿ ಪ್ರಸೂತಿ ಸೇವೆಯಲ್ಲು ಸಹ ಗಣನೀಯ ಸೇವೆ ಮಾಡಿದ್ದಾರೆ ,ಇವರ ಪ್ರಾಮಾಣಿಕ ಸೇವೆ ನಮಗೆ ಮಾದರಿಯಾಗಲಿ ಅದೇ ರೀತಿಯಲ್ಲಿ ಈ ವೈದಿಕ ವೃತ್ತಿಯನ್ನು ವಂಶಪಾರಂಪರ್ಯವಾಗಿ ಮುಂದುವರಿಸಿ ಎಂದು ಶಾಸಕರು ಅವರ ಕುಟುಂಬಸ್ತರಿಗೆ ಸಲಹೆ ನೀಡಿದರು
ಇದೇ ಸಮಯದಲ್ಲಿ ಎಲ್ಲಾ ಅಧಿಕಾರಿವರ್ಗ ,ಜನಪ್ರತಿನಿದಿಗಳು ,ಮುಖಂಡರುಗಳಾದ. ಚಂದ್ರಪ್ಪ ,ಜಗದಿಶ್ ,ನಿಂಗರಾಜು ,ವೇಲು ಸೇರಿದಂತೆ ಹಲವಾರು ಹಾಜರಿದ್ದರು..ವರದಿ ಉಸ್ಮಾನ್ ಖಾನ್ ಬಂಡಳ್ಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.