ಮುಂಬೈ: ಮಹಿಳಾ ಪತ್ರಕರ್ತೆಯೊಬ್ಬರು ಹಣೆಗೆ ಬಿಂದಿ ಹಾಕದೇ ಇರುವ ಕಾರಣ ಅವರೊಂದಿಗೆ ಮಾತನಾಡಲು ಮಹಾರಾಷ್ಟ್ರದ ಸಂಭಾಜಿ ಭಿಡೆ ಗುರುಜಿ ನಿರಾಕರಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾದ ಬಳಿಕ ಹೊರಗೆ ಬರುತ್ತಿದ್ದ ಸಂಭಾಜಿ ಭಿಡೆ ಗುರುಜಿ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಈ ವೇಳೆ ಗುರುಜಿ ಅವರನ್ನು ಮಾತನಾಡಿಸಲು ಮುಂದಾದ ಪತ್ರಕರ್ತೆಗೆ ಭಾರತಮಾತೆ ವಿಧವೆಯಲ್ಲ – ಪತ್ರಕರ್ತೆಯನ್ನು ಭಾರತ ಮಾತೆಗೆ ಹೋಲಿಸಿ ಹಣೆಗೆ ಬಿಂದಿ ಇಡದ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದರು.