ತಮ್ಮ ಖಡಕ್ ನಿರ್ಧಾರಗಳಿಂದ, ಚುರುಕಿನ ಕಾರ್ಯ ಚಟುವಟಿಕೆ ಹಾಗೂ ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ. ಆಗಿದ್ದ ಶ್ರೀಮತಿ ಡಾ|| ಸುಮನ್ ಪನ್ನೆಕರ್ ಅವರ ವರ್ಗಾವಣೆ ಆಗಿದ್ದು ಜಿಲ್ಲೆಯ ಜನರಿಗೆ ತುಂಬಾ ಬೇಸರ ತರಿಸಿದೆ, ಸುಮನ್ ಪನ್ನೇಕರ ಅವರು ಆಗಿ ಬಂದಾಗಿನಿಂದ ಜಿಲ್ಲೆಯಲ್ಲಿ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳು ನಿಂತಿದ್ದವು,ಇದು ಇಲ್ಲಿನ ಕೆಲವರಿಗೆ ನುಂಗಲಾರದ ತುತ್ತಾಗಿತ್ತು ಅಂತು ಇಂತೂ ಎಸ್.ಪಿ ಅವರ ವರ್ಗಾವಣೆ ಆಗಿದ್ದು ಅವರ ಸ್ಥಾನಕ್ಕೆ ಉಡುಪಿ ಜಿಲ್ಲೆಯ ಎಸ್.ಪಿ ಆಗಿದ್ದ ವಿಷ್ಣುವರ್ಧನ್ ಅವರು ನಿಯುಕ್ತಿಗೊಂಡಿದ್ದಾರೆ.ಇಷ್ಟು ದಿನ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಆಗಿ ಕೆಲಸ ನಿರ್ವಹಿಸಿದ ಸುಮನ್ ಪನ್ನೇಕರ್ ಅವರ ಬಗ್ಗೆ ಜಿಲ್ಲೆಯ ಜನ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.