ಪಾವಗಡ: ರಾಜ್ಯ,ಅಂತರಾಜ್ಯಗಳ ಪೊಲೀಸರ ನಡುವೆ ಮಾಹಿತಿ,ವಿಚಾರ ವಿನಿಮಯ ಆರೋಗ್ಯಕರವಾಗಿದ್ದರೆ ಪ್ರಕರಣ ಬೇಧಿಸಲು ಸಾಧ್ಯವಾಗುತ್ತದೆ ಎಂದು ಮಧುಗಿರಿ ಉಪವಿಭಾಗದ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಿಡಗಲ್ ಗಿರಿ ಬಳಿ ಇರುವ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಮಧುಗಿರಿ ಉಪವಿಭಾಗದ ನೇತೃತ್ವದಲ್ಲಿ ಬುಧವಾರ ಗಡಿಭಾಗದ ಅಪರಾಧ ಸಭೆಯಲ್ಲಿ ಮಾತನಾಡಿದ ಅವರು ಪೋಲೀಸ್ ಇಲಾಖೆಯಲ್ಲಿ ಕಾನೂನು ಒಂದೇ ಇದ್ದರು,ಕೆಲ ನಿಯಮಗಳು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಲಿಸಿದರೆ ವಿಭಿನ್ನತೆಯಿಂದ ಕೂಡಿರುತ್ತವೆ.
ಹಾಗಾಗಿ ಅನ್ಯರಾಜ್ಯಗಳಲ್ಲಿ ಅಪರಾಧ ಪತ್ತೆ ಕಾರ್ಯದಲ್ಲಿ ಭಾಷೆ,ನಿಯಮಗಳು ತೊಡಕಾಗದಂತೆ ಪತ್ತೆ ಹಚ್ಚುವಲ್ಲಿ ಸ್ನೇಹ ಸೌಹಾರ್ದ ಭಾವನೆಯೊಂದಿಗೆ ಪೊಲೀಸ್ ಇಲಾಖೆಗಳ ನಡುವೆ ವಿಚಾರ, ಮಾಹಿತಿ ವಿನಿಮಯ ಉತ್ತಮವಾಗಿರಬೇಕು. ಪತ್ತೆ ಕಾರ್ಯದ ದಾಖಲಾತಿ ಸಂಗ್ರಹದಲ್ಲಿ ಭಾಷೆ,ರಾಜ್ಯಗಳು ತೊಡಕಾಗದಂತೆ ಪ್ರತಿಯೊಬ್ಬರು ಸಹಕಾರಿಯಾಗಬೇಕು ಎಂದು ಸಹ ಪೊಲೀಸ್ ಅಧಿಕಾರಿಗಳ ನಡುವೆ ಡಿ.ವೈ.ಎಸ್ಪಿ ವೆಂಕಟೇಶ್ ನಾಯ್ಡ್ ಅವರು ಮಾಹಿತಿ ಹಂಚಿಕೊಂಡರು.
ಗಡಿಭಾಗಗಳಲ್ಲಿ ದಿನಬೆಳಗಾದರೆ ಪೊಲೀಸ್ ಇಲಾಖೆಗೆ ಒಂದಿಲ್ಲೊಂದು ಅಂತರಾಜ್ಯ ಪ್ರಕರಣ ಎಡತಾಕುತ್ತಲೇ ಇರುತ್ತವೆ.ಅಂತಹ ಸಂದರ್ಭದಲ್ಲಿ ಪೊಲೀಸರು ಪತ್ತೆ ಕಾರ್ಯಕ್ಕೆ ಇಳಿದಾಗ ಮಾಹಿತಿ ಕೊಡುವ ಮನಸ್ಥಿತಿಗಳು ಇಲ್ಲ ಭಾಷೆ ಅಡೆತಡೆ ಮಾಡಬಹುದು . ಈ ಕುರಿತಾಗಿ ಬಾಹ್ಯ, ಆಂತರೀಕ ಪೊಲೀಸ್ ಅಧಿಕಾರಿಗಳ ವಿಚಾರ ವಿನಿಮಯಿಂದ ಕೊಲೆ, ಕಳ್ಳತನ, ತಲೆಮರೆಸಿಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತವೆ ಎಂದು ಬೆಂಗಳೂರು, ತುಮಕೂರು,ಅನಂತಪುರ,ಪುಟ್ಟಪರ್ತಿ,ಚಿಕ್ಕಬಳ್ಳಾಪುರ, ಹಲವೆಡೆಯಿಂದ ಈ ಸಭೆಗೆ ಬಂದಂತಹ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಆಂಧ್ರದ ಪೆನುಗೊಂಡ ಡಿವೈಎಸ್ಪಿ ರಮ್ಯ,ಸಿ.ಬಿ.ಪುರ ಡಿ.ವೈ.ಎಸ್ಪಿ ವಾಸುದೇವ, ನೆಲಮಂಗಲ ಡಿ.ವೈ.ಎಸ್ಪಿ ಗೌತಮ್,ಅಧಿಕಾರಿಗಳಾದ ಇನ್ಸ್ಪೆಕ್ಟರ್ ಕಾಂತರೆಡ್ಡಿ,ಕೆ.ಪಿ.ಸತ್ಯನಾರಾಯಣ, ಲಿಂಗರಾಜು,ಜಿ.ನಾಗರಾಜು ರಾವ್,ಬಿ.ಟಿ.ವೆಂಕಟೇಶ್ವರ್,.ಕೆ.ನರೇಂದ್ರ,ನಾಗಸ್ವಾಮಿ,ಪಿ.ಬಾರ್ಗವ್ ರೆಡ್ದಿ,ಎನ್.ವಿ.ರಮಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ:- ಅನಿಲ್ ಕುಮಾರ್ ಪಾವಗಡ