ಸಾವಿನ ನೆನಪು ಮರುಕಳಿಸುತಿದೆ
ವರುಷವೂ ಮಾಸಿ ಹೋಗುತಿದೆ
ಇಲ್ಲವೆನ್ನೋ ಹುಸಿ ಕಾಡುತಿದೆ
ಕನಸುಗಳೇ ಕಾಣದ ಕಂಗಲಾಗಿದೆ
ಪುಣ್ಯಕೋಟಿಯ ಒಲವು ಹಂಚಿದೆ
ಅಮೃತದ ಸವಿ ನೀಡಿದೆ
ಪುನೀತನಾಗಿ ರಾರಾಜಿಸಿದ ಕುವರ
ನೀಲಮೇಘ ಶ್ಯಾಮನಂತೆ ಅಮರ
ತಪಸ್ಸು ಮಾಡ್ಯಾರ ಹೆತ್ತವರು
ರಾಜಗಾಂಭೀರ್ಯತೆಯ ಗುಣ ಹೊಂದವರು
ಜಗದಕಣ್ಣಾಗಿ ಬೆಳೆದ ಅಪ್ಪು
ಕುಗ್ಗದ ಜಗ್ಗದ ಶಾರೀರ್ಯದ ಎಪ್ಪು / ಕಪ್ಪು
ಮಾಗದ ವಯಸ್ಸಲ್ಲೇ ಮರಣ
ರಭಸವೇ ಅನಾಹುತಕ್ಕೆ ಕಾರಣ
ವಾರ್ಷಿಕೋತ್ಸವದ ಸುದಿನ ಬಂದಿಹದು
ಲೋಕ ಬೆಳಗಲು ಸಾಗಿಹದು
ಕಂಬನಿ ಮಿಡಿಯದ ಹೃದಯವಿಲ್ಲ
ಕಂಗಳು ಒದ್ದೆಯಾಗದ ಮನುಜರಿಲ್ಲ
ಬದುಕು ಸಾಗಿಸಲು ಇವರೇ ಇಲ್ಲ
ಅವರ ನೆನಪು ಸದಾ ಕಾಡುತಿದೆಯಲ್ಲ
ಸರಳತೆಯ ಪ್ರತೀಕನಾಗಿ ಮಿನುಗಿದಾತ
ಭುವನಕ್ಕೆಲ್ಲಾ ನಟನೆಯ ಗಂಧವ ಪಸರಿಸಿದಾತ
ಮೆಲುಕು ಹಾಕಿದಷ್ಟು ಮರೆಯಾಗದಾತ
ಜಗಿದಷ್ಟು ರಸ ಉಣಬಡಿಸಿದಾತ.
💖 ಕಾವ್ಯನಾಮ : ಅರಸು