ಹುಮನಾಬಾದ್:ಜನಪ್ರಿಯ ನಾಯಕರೆಂದೇ ಪ್ರಸಿದ್ಧ ಪಡೆದ ಬಡವರ ಬಂಧು, ಹಿಂದುಳಿದವರ ನಾಯಕ, ಯುವಕರ ಕಣ್ಮಣಿ,
ಸದಾ ಕ್ರಿಯಾಶೀಲ ಚಟುವಟಿಕೆಗಳ ಉತ್ಸಾಹಿ ನೇತಾ,ಸಾಮಾಜಿಕ ಸೇವಕರು, ಕಷ್ಟದಲ್ಲಿ ಇದ್ದವರನ್ನು ಕಂಡರೆ ಸಾಕು ಅವರ ಸಹಾಯಕ್ಕೆ ಧಾವಿಸುವ ಸರದಾರ ಎಂದೇ ಖ್ಯಾತರಾದ ಡಾ.ರೇವಣ್ಣಸಿದ್ಧಪ್ಪಾ ಪಾಟೀಲ್ (ಸಿದ್ದು ಪಾಟೀಲ್) ಜನ್ಮದಿನ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಗೆಳೆಯರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.
( 06.11.2022) ರ ಸಾಯಂಕಾಲ 04 ಗಂಟೆಗೆ ಹುಮನಾಬಾದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 65 ನೂರ್ ಧಾಬಾ ಎದುರುಗಡೆ ಗೆಳೆಯರ ಬಳಗದಿಂದ ಸಿದ್ದು ಪಾಟೀಲರ 45 ನೇ ಹುಟ್ಟು ಹಬ್ಬವನ್ನು ಆಚರಣೆ ಉತ್ಸಾಹದಿಂದ ಮಾಡಲಾಗುತ್ತಿದ್ದು . ಪೂಜ್ಯ ಹಾರಕೂಡ ಶ್ರೀ ಚೆನ್ನವೀರ ಶಿವಾಚಾರ್ಯರರು , ಗಂಗಾಧರ ಶಿವಾಚಾರ್ಯರರು ಸಂಸ್ಥಾನ ಹಿರೇಮಠ ಹುಮನಾಬಾದ , ತಡೋಳ ಸಂಸ್ತಾನ ಮಠ ಶ್ರೀಗಳು , ಚಿಟಗುಪ್ಪಾ ಹಿರೇಮಠ ಸಂಸ್ತಾನ ಮಠ ಶ್ರೀಗಳು , ಹುಡಗಿ ಸಂಸ್ತಾನ ಮಠದ ಶ್ರೀ , ಹಳ್ಳಿಖೇಡ-ಬಿ ಸಂಸ್ತಾನ ಮಠದ ಶ್ರೀ , ಹವಾಮಲ್ಲಿನಾಥ ಮಾಹಾರಾಜರು ಸೇರಿದಂತೆ ಹಲವು ಪೂಜ್ಯ ಶ್ರೀಗಳ ಧಿವ್ಯಾಸನ್ನಿಧಿಯಲಿ ಹಾಗೂ ಕೇಂದ್ರ ಸಚಿವರು,ರಾಜ್ಯ ಸಂಪುಟ ಸಚಿವರು, ಸಂಸದರು,ವಿವಿಧ ನಿಗಮ ಮಂಡಳಿ ಅಧ್ಯಕ್ಷರು , ಪಕ್ಷದ ಹಿರಿಯ ಮುಖಂಡರು, ಜಿಲ್ಲೆಯ ನಾಯಕರು ಆಗಮಿಸಿ ಶುಭ ಹಾರೈಸುತ್ತಾರೆಂದರು.
ಈ ಸಂದರ್ಭದಲ್ಲಿ ಮುತೈದಿ ತಾಯಿಯವರಿಗೆ ಉಡಿ ತುಂಬುವ ಕಾರ್ಯಕ್ರಮ, ರೋಗಿಗಳಿಗೆ ಹಣ್ಣುಗಳನ್ನು ವಿತರಿಸುವುದು,ರೈತರಿಗೆ ಸನ್ಮಾನ,ಅಂಧ ಮಕ್ಕಳಿಗೆ ಹಣ್ಣುಹಂಪಲ್ಲು ವಿತರಣೆ,ಮಾಜಿ ಸೈನಿಕರಿಗೆ ಸನ್ಮಾನ, ಪುರಸಭೆಯ ಪೌರಕಾರ್ಮಿಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.ಅದೇ ರೀತಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಖ್ಯಾತ ಕನ್ನಡ ಸಂಗೀತ ನಿರ್ದೇಶೇಕ ಗುರುಕಿರಣ್ ತಂಡದಿಂದ ಮತ್ತು ಬಿಗ್ ಬಾಸ್ ಖ್ಯಾತಿಯ ನಟ ನಾಯಕ ಪ್ರಥಮ ಅವರ ಚಿತ್ರತಂಡದೊಂದಿಗೆ ರಸಮಂಜರಿ ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಂಧುಗಳು, ಹಿತೈಷಿಗಳು, ಆತ್ಮೀಯರು,ಗೆಳೆಯರು ಆಗಮಿಸಿ ಡಾ.ಸಿದ್ದು ಪಾಟೀಲರಿಗೆ ಶುಭ ಕೋರಬೇಕೆಂದು ಶ್ರೀನಾಥ ದೇವಣಿ , ನಾಗಭೂಷಣ ಸಂಗಮ , ಗಿರೀಶ್ ತುಂಬಾ , ಸುನಿಲ್ ಪತ್ರಿ , ಸಂತೋಷ ನವದಗಿ , ರಾಮೇಶ ಖೇರೋಜಿ , ಸಂಜು ವಾಡೆಕರ , ಲಖನ್ , ಕಿಶೋರ್ , ಸುರೇಶ್ , ಕುಶಾಲ್ , ಸಂದೀಪ ಮನವಿಯನ್ನು ಮಾಡಿಕೊಂಡಿದ್ದಾರೆ.
