ಕನ್ನಡ ನಾಡಿದು ನನ್ನೂರು
ಇಲ್ಲಿ ಹುಟ್ಟಿಹರೆಲ್ಲರು ನನ್ನವರು
ಕನ್ನಡ ಮಾತೆಯ ಕುವರರು
ಕನ್ನಡ ತಾಯಿನುಡಿ ಆಡುವರು
ಕನ್ನಡ ನಾಡಿದು ಬಲುಚಂದ
ಕನ್ನಡ ಮಾತು ಆನಂದ
ಮಲ್ಲಿಗೆ ಪರಿಮಳ ಸುಗಂಧ
ತೆಂಗು ಅಡಿಕೆ ಮಾಮರ ಶ್ರೀಗಂಧ
ಕೆಚ್ಚೆದೆ ವೀರರ ಸಂಬಂಧ
ದಿಟ್ಟ ವನತೆಯರ ಮಾತೊಂದ
ರಾಜಕೋಟೆ ಕೊತ್ತಲೆ ನೋಡಂದ
ಗುಡಿಶಿಲ್ಪದರಮನೆ ಬಹಳಂದ
ಪಂಪ ರನ್ನ ಜನ್ನರ ನುಡಿ ಅಂದ
ಕವಿ ಕುವೆಂಪು ಬೇಂದ್ರೆರ ಕಾವ್ಯಾಂದ
ಕಾರಂತ ಮಾಸ್ತಿಕವಿಕುಲ ಕಾರ್ನಾಡ
ಶಿರಿಗನ್ನಡ ನಾಟಕ ಕಂಬಾರು
ಶರಣ ಜ್ಞಾನಿಗಳು ಜನಿಸಿದರು
ಪದಪುರಾಣ ವಚನವ ರಚಿಸ್ಯಾರು
ದಾಸ ಶ್ರೇಷ್ಠ ಮುನಿಸಂತರು
ಕವಿಕನ್ನಡ ಶಿಸುನಾಳ ಶರೀಪರು
ಪಾವನ ನದಿಗಳ ಸಂಗಮ
ಕೃಷ್ಣ ತುಂಗಕಾವೇರಿಯರ ವಿಹಂಗಮ.
ಬೆಟ್ಟ ಕಾಡುವನ ನೋಡಮ್ಮ
ವನ್ಯಮೃಗ ಗಣಿಶಿರಿದೇವಿ ಕನ್ನಡಮ್ಮ
ಕನ್ನಡ ಹಿರಿಮೆಯು ದೊಡ್ಡದು
ಎಷ್ಟು ವರ್ಣಿಸಲದು ಸಾಲದು
ಕನ್ನಡ ನಾಡಿದು ನನ್ನೂರು
ಇಲ್ಲಿ ಹುಟ್ಟಿಹರೆಲ್ಲರು ನನ್ನವರು
-ಪಿ ಬಿ ಕಮ್ಮಾರ ಐಹೊಳೆ