ಯಾದಗಿರಿ:ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಯಾಳಗಿ ಗ್ರಾಮದ ಸಿಸಿ ಲೈನ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ . ಸರ್ಕಾರದಿಂದ ಮಂಜೂರಾದ ಹಣ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಗುತ್ತಿಗೆದಾರರ ಮತ್ತು ಅಧಿಕಾರಿಗಳು ಸಿಸಿ ಲೈನ್ ರಸ್ತೆ ಮಾಡದೇ ಅವರ ಜೇಬುಗಳನ್ನು ತುಂಬಿ ಕೊಳ್ಳುತ್ತಿದ್ದಾರೆ.
ಎಂದು ಯಾಳಗಿ ಗ್ರಾಮದ ರೈತರು ದೂರು ನೀಡಿದ್ದಾರೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು
ಯಾಳಗಿ ಗ್ರಾಮದ ರೈತರ ಬೆಳೆಗಳು ಸಂಪೂರ್ಣವಾಗಿ ಹಾನಿ ಆಗುತ್ತಿದೆ ಎಂದು ರೈತರು ಕಣ್ಣೀರಿಗೆ ಬೆಲೆ ಇಲ್ಲದಂತಾಗಿದೆ.
ಸಿಸಿ ಲೈನ್ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿಸಿ . ಸಂಬಂಧ ಪಟ್ಟ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ವರದಿ
ರಾಜಶೇಖರ ಮಾಲಿ ಪಾಟೀಲ