ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು ತಾಲ್ಲೂಕು ಕೇಂದ್ರದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ.) ಅಸ್ತಿತ್ವ

ಹನೂರು : ಹನೂರು ಪಟ್ಟಣದ ಮೈರಾಡ ಕಚೇರಿಯಲ್ಲಿ ಶನಿವಾರದಂದು ಸಮಾನ ಮನಸ್ಕ ಪತ್ರಕರ್ತರು ಸಭೆ ಸೇರಿದ್ದರು.
ಆ ಸಭೆಯಲ್ಲಿ ಮೊದಲು ಕರ್ನಾಟಕ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವನ್ನು ಪಡೆದು ನಂತರ ಸಂಘದ ದ್ಯೆಯೋದ್ದೇಶ ಹಾಗೂ ಸಂಘದ ಚಟುವಟಿಕೆಗಳ ಬಗ್ಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯದ್ಯಕ್ಷ ಶ್ರೀಯುತ ಮುರುಗೇಶ್ ಶಿವಪೂಜೆ ಅವರ ಸೂಚನೆಯ ಮೇರೆಗೆ ಜಿಲ್ಲಾ ಸಂಚಾಲಕರಾದ ಹಾಗೂ ತಾಲ್ಲೂಕು ಗೌರವ ಅದ್ಯಕ್ಷರಾದ ಬಂಗಾರಪ್ಪ ಸಿ ಸಮ್ಮುಖದಲ್ಲಿ
ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಈ ಸಂಘವು ರಾಷ್ಟ್ರೀಯ ಹಾಗೂ ರಾಜ್ಯದ ಮಾನ್ಯತೆಯನ್ನು ಪಡಿದಿರುತ್ತದೆ. ಬೇರೆ ಬೇರೆ ಸಂಘಗಳಂತೆ ಬರಿ ಪತ್ರಕರ್ತರಾದವರಿಗೆ ಮಾತ್ರ ಗುರುತಿನ ಪತ್ರ (ಮೀಡಿಯಾ ಕಾರ್ಡ್) ನೀಡದೆ ಪತ್ರಿಕೆಗಳನ್ನು ಹಂಚುವವರಿಗೆ. ಪತ್ರಿಕೆಗಳ ಏಜಂಟರುಗಳಿಗೂ ನೀಡುವ ಸೌಲಭ್ಯ ಈ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇದೆ.

ರಾಜ್ಯದಲ್ಲಿ ಪ್ರಮುಖವಾಗಿ ಗ್ರಾಮೀಣ ಬಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸದಾಕಾಲ ಸಭೆ ಸಮಾರಂಭಗಳೆಂದು ಓಡಾಡುವ ಪತ್ರಕರ್ತರು ಅನೇಕ ಬಾರಿ ಅಪಘಾತಗಳಿಗೆ ಒಳಗಾಗಿ ಎಷ್ಟೋ ಬಾರಿ ಚಿಕಿತ್ಸೆಗೆ ಹಣ ಇಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಾರೆ ಎಷ್ಟೋ ಬಾರಿ ಸಮಾಜ ಕಂಟಕರಿಂದ ಹಲ್ಲೆಗೆ ಒಳಗಾಗುತ್ತಾರೆ ಅಂಥವರಿಗೆ ಸಹಾಯವಾಗಲೆಂದು ಸಂಘವು ಸದಸ್ಯ ಪತ್ರಕರ್ತರಿಗೆ 4 ಲಕ್ಷ ರೂಪಾಯಿಗಳ ಜನತಾ ಅಪಘಾತ ವಿಮಾ ಸೌಲಭ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ ಅಪಘಾತದಿಂದ ನಿಧನರಾಗುವ ಸದಸ್ಯರ ಸಂಬಂಧಿಕರಿಗೆ 4 ಲಕ್ಷ ರೂ. ಮತ್ತು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಗರಿಷ್ಠ70 ಸಾವಿರ ರೂ.ಗಳ ಚಿಕಿತ್ಸೆ ವೆಚ್ಚವನ್ನು ನೀಡಲಾಗುತ್ತಿದೆ.
ಈ ಯೋಜನೆ ನಮ್ಮ ಸಂಘದಲ್ಲಿ ಮಾತ್ರ ಇದ್ದು ಈ ಸೌಲಭ್ಯದ ಲಾಭವನ್ನು ವಿವಿಧ ಜಿಲ್ಲೆಗಳ ಪತ್ರಕರ್ತರು ಪಡೆದುಕೊಂಡಿದ್ದಾರೆ.

ಇದಲ್ಲದೆ ವಿವಿಧ ಜಿಲ್ಲೆಗಳ ಎಂಟು ಸದಸ್ಯರು ಸೇರಿ ಪತ್ರಕರ್ತರಿಗಾಗಿ “ಕರ್ನಾಟಕ ಜರ್ನಲಿಸ್ಟ್ ಯೂನಿಯನ್” ಟ್ರಸ್ಟ್ (ಇಂಡಿಯನ್ ಟ್ರಸ್ಟ್ ಕಾಯಿದೆ) ಒಂದನ್ನು ಸ್ಥಾಪಿಸಿ ತಮ್ಮ ಸ್ವಂತ (ಟ್ರಸ್ಟಿ ಗಳಿಂದ ವೈಯಕ್ತಿಕ ವಂತಿಕೆ) ಹಣವನ್ನು ಒಂದು ನಿಧಿ ಮಾಡಿ ಫಿಕ್ಸ್ ಡಿಪಾಸಿಟ್ ಮಾಡಲಾಯಿತು ಪ್ರತಿ ವರ್ಷ ಈ ನಿಧಿಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯ ಮಾಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ ಪ್ರತಿವರ್ಷ ಈ ಟ್ರಸ್ಟ್ ಮೂಲ ನಿಧಿಯನ್ನು ಬಳಸದೆ ಬಡ್ಡಿ ಹಣವನ್ನು ಮಾತ್ರ ಅತಿ ಅಗತ್ಯ ಇರುವ ಪತ್ರಕರ್ತರಿಗೆ. ಹಿರಿಯ ಪತ್ರಕರ್ತರ ಚಿಕೆತ್ಸೆ ಮತ್ತು ಅಕಾಲ ಮರಣಕ್ಕೆ ತುತ್ತಾಗುವ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ ಸಹಾಯ ಮಾಡುವ ಕಾರ್ಯಕ್ಕೆ ಬಳಸಲಾಗುತ್ತಿದೆ.

ಪತ್ರಕರ್ತರಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ “ಕರ್ನಾಟಕ ಪತ್ರಕರ್ತರ ವಿವಿದ್ದೋದ್ದೇಶಗಳ ಸಹಕಾರಿ ಸಂಘ” ಒಂದನ್ನು ಮೂರು ವರ್ಷಗಳ ಹಿಂದೆ ಸ್ಥಾಪಿಸಲಾಯಿತು.

100 ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಈ ಸಂಘವು ಸದ್ಯಕ್ಕೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ವಿವಿದ ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಶೀಘ್ರದಲ್ಲೇ ಮಂಡ್ಯ ರಾಮನಗರ ಬೆಂಗಳೂರು ಗ್ರಾಮಾಂತರಜಿಲ್ಲೆಗಳಲ್ಲಿಯೂ ತನ್ನ ಕಾರ್ಯ ಆರಂಭ ಮಾಡಲಿದೆ

ಪತ್ರಕರ್ತರು ತಮ್ಮ ಪತ್ರಿಕೆಗಳಲ್ಲಿ ದೈನಂದಿನ ವರದಿಗಳನ್ನು ಸಿದ್ಧಪಡಿಸಲು ಕಿ.ಮೀ.ಗಟ್ಟಲೆ ಸ್ವಂತ ಸ್ಥಳದಿಂದ ಹೋಗಬೇಕಾಗುತ್ತದೆ. ಆ ಕಾರಣಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ಮತ್ತು ರೈಲು ಪಾಸ್ ಸೌಲಭ್ಯಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದು ಸಹ ಈ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಿಗೆ ಸಿಗುವುದು ಖಚಿತ.

ಆ ದಿನದ ಸಭೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯ ಸ್ಥಳೀಯ ಎಲ್ಲ ಸಮಾನ ಮನಸ್ಕ ಪತ್ರಕರ್ತರ ಒಮ್ಮತದ ಮೇರೆಗೆ ಮೊದಲಿಗೆ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕುಮಾರ್ ದೊರೆ ಕಾರ್ಯದರ್ಶಿ
ಅಭಿಲಾಷ್ ಗೌಡ ಉಪಾದ್ಯಕ್ಷಾರಾಗಿ ಸತೀಶ್ ,ಖಜಾಂಚಿ
ಚೇತನ್ ಕುಮಾರ್ ಎಲ್
ಇವರನ್ನು ಕರ್ನಾಟಕ ಪತ್ರಕರ್ತರ ಸಂಘ ಕ್ಕೆ ಆಯ್ಕೆ ಮಾಡಲಾಯಿತು.
ಇವರನ್ನು ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಆಯ್ಕೆ ಮಾಡಲಾಯಿತು.

ಇದಕ್ಕೆ ಸಭೆಯಲ್ಲಿ ಎಲ್ಲರು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿದರು.

ಈ ವೇಳೆ ಶಾರುಖ್ ,ಚೇತನ್,ರವಿ,ಪ್ರಸನ್ನ, ಸತೀಶ್ ,ಬಸವರಾಜು, ಉಸ್ಮಾನ್ ಅಜಿತ್ ವೀಲಿಯಮ್, ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು. ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ