ಯಾದಗಿರಿ ಜಿಲ್ಲೆ:ಇಂದು ಶಹಾಪುರ ನಗರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಲೋಕೇಶ್ ತಾಳಿಕಟ್ಟೆ ಬೆಂಗಳೂರು ರಾಜ್ಯ ಅಧ್ಯಕ್ಷರು ರೂಪ್ಸಾ ಸಂಘಟನೆಯ ಕರ್ನಾಟಕ ಹಾಗೂ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯ ಹಾಗೂ ಶಾಲಾ ಆಡಳಿತ ಮಂಡಳಿಯವರು ಭಾಗವಹಿಸಿದ್ದರು .
ಈ ಸಮಾರಂಭದಲ್ಲಿ ಸೂಗೂರೇಶ್ವರ ಶಾಲೆಯ ಮುಖ್ಯ ಗುರುಗಳಾದ ಕುಮಾರಿ ರೂಪಾ ಪಾಟೀಲ ಇವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯ ಅತಿಥಿಯಾಗಿ ಭಾಗವಹಿಸಿದಸನ್ಮಾನ್ಯ.ಶ್ರೀ ಶರಣಬಸಪ್ಪಗೌಡ ದರ್ಶನಪುರ ಶಾಸಕರು ಶಹಾಪುರ,ಶ್ರೀಲೋಕೇಶ್ ತಾಳಿಕಟ್ಟೆ,ರಾಜ್ಯಾಧ್ಯಕ್ಷರು ರೂಪ್ಸಾ ಸಂಘಟನೆ,ಶ್ರೀಕಾಂತಿಲಾಲ ಶೆಟ್ಟಿ ಅಧ್ಯಕ್ಷರು ಸೂಗೂರೇಶ್ವರ ಹಿ.ಪ್ರಾ.ಶಾಲೆ ಶಹಾಪುರ,ಶ್ರೀರವೀಂದ್ರನಾಥ ಚೌದ್ರಿ
ಅಧ್ಯಕ್ಷರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಶಹಾಪುರ,ವಿ.ಸತ್ಯಂ ರೆಡ್ಡಿ ಅಧ್ಯಕ್ಷರು
ಶಾರದಾ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ಶಹಾಪುರ,
ಸಮಾರಂಭದಲ್ಲಿ ಎಲ್ಲಾ ಗೌರವಾನ್ವಿತ ಸದಸ್ಯರುಗಳು ಭಾಗವಹಿಸಿದ್ದರು.
ವರದಿ-ಶ್ರೀರಾಜಶೇಖರ ಮಾಲಿ ಪಾಟೀಲ
