ಹನೂರು: ಪಟ್ಟಣದ ಬಿ.ಆರ್.ಸಿ ಕೇಂದ್ರದಲ್ಲಿ ಇತ್ತಿಚೆಗೆ ನಡೆದ ಶಿಕ್ಷಕರಿಬ್ಬರ ಗದ್ದಲ ಗಲಾಟೆ ಕೈ.ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಘಟನೆ ಸೆರೆಯಾಗಿರುವ ಸಿ.ಸಿ ಟಿವಿ ಪುಟೆಜ್ ವಿಡಿಯೋ ವೈರಲ್ ಆಗಿರುವುದಕ್ಕೆ ಶಿಕ್ಷಕರೊಬ್ಬರ ಕೈವಾಡವಿದೆ ಎಂಬುದು ಇಲ್ಲಿನ ಶಿಕ್ಷಕ ವಲಯದಿಂದಲೇ ಗುಸು ಗುಸು ಕೇಳಿ ಬರುತ್ತಿದೆ.
ಬಿ.ಆರ್.ಸಿ ದಿನೇಶ್ ಹಾಗೂ ಶಿಕ್ಷಕ ರಾಜು ಅವರು ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಕಚ್ಚಾಡಿಕೊಂಡು ಕೈಕೈ ಮಿಲಾಯಿಸಿರುವ ಘಟಾನಾವಳಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸರಿಯಷ್ಟೆ. ಗಲಾಟೆಯ ಬಗ್ಗೆಯಾಗಲಿ ಅಥವಾ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಬಗ್ಗೆಯಾಗಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲುಪುವ ಮುನ್ನವೇ ಮಾಧ್ಯಮದವರಿಗೆ ತಲುಪಿ ಸುದ್ದಿಯಾದ ನಂತರ ಅಧಿಕಾರಿಗಳಿಗೆ ಗೊತ್ತಾಗಿರುವುದರ ಹಿಂದೆ ಪ್ರಭಾವಿ ಶಿಕ್ಷಕರು ಒಬ್ಬರ ಕೈವಾಡವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸಿದಂತಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಿಕ್ಷಕರ ಗಲಾಟೆಗೆ ಪ್ರಕರಣಕ್ಕೂ ಮುನ್ನ ಗಲಾಟೆ ಸಂಬಂಧದ ವಿಡಿಯೋವನ್ನು ಮಾಧ್ಯಮಗಳಿಗೆ ನೀಡಿದವರ ವಿರುದ್ಧವೇ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ. ಉರಿಯುವ ಬೆಂಕಿಯಲ್ಲಿ ಕೈಕಾಯಿಸಿಕೊಂಡರು ಎಂಬಂತೆ ತನಗಾಗದ ಶಿಕ್ಷಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿ ಶಿಕ್ಷಕರಿಬ್ಬರ ಸಣ್ಣಪುಟ್ಟ ಗಲಾಟೆಯ ವೀಡಿಯೋ ದೃಶ್ಯವನ್ನ ದೊಡ್ಡದೆಂಬತೆ ಬಿಂಬಿಸಿ ಮಾಧ್ಯಮಗಳಿಗೆ ನೀಡುವ ಮೂಲಕ ತನ್ನ ಬೆಳೆ ಬೆಯಿಸಿಕೊಳ್ಳಲು ಮುಂದಾಗಿರುವವರ ಮರ್ಮದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ.
ಶಿಕ್ಷಕರಿಬ್ಬರ ಗಲಾಟೆ ಸಂಬಂಧ ಶಿಕ್ಷಕರು ಪೊಲೀಸ್ ಠಾಣೆಯ ಮೆಟ್ಟಿಲೇರುವ ಮೂಲಕ ಅನ್ಯಹೊರಗಿನ ವ್ಯಕ್ತಿಗಳು ಮಧ್ಯ ಪ್ರವೇಶಿಸಿ ರಾಜಿ ಸಂಧಾನದ ಮೂಲಕ ಗಲಾಟೆ ಪ್ರಕರಣವನ್ನು ಅಂತ್ಯಗೊಳಿಸಿರುವುದು ಎಷ್ಟರಮಟ್ಟಿಗೆ ಸರಿ. ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಶಿಕ್ಷಕರು ಈ ಗಲಾಟೆಯನ್ನು ಶಿಕ್ಷಣ ಇಲಾಖೆ ಒಳಗೆ ಸಮಾಧನ ಮಾಡಬಹುತ್ತಿತ್ತು. ತಮ್ಮ ವೈಯಕ್ತಿಕ ದ್ವೇಷದಿಂದ ಹೊರ ಜಗತ್ತಿಗೆ ತಿಳಿಯುವ ಮೂಲಕ ಶಿಕ್ಷಕ ಸಮುದಾಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುವುದು ವಿಷಾದನೀಯವೇ ಸರಿ.
ಅಹಿತಕರ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಶಿಕ್ಷಕರ ವಿರುದ್ಧ ಇಲಾಕ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಇಂತಹ ಪ್ರಕರಣಗಳು ಮುಂದೆಯು ಮರುಕಳಿಸದಂತೆ ಎಚ್ಚರಿಕೆ ನೀಡಬೇಕಾಗಿರುವುದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಕರ್ತವ್ಯವಾಗಿದೆ. ವರದಿ ಉಸ್ಮಾನ್ ಖಾನ್
ಬಂಡಳ್ಳಿ