ಅಥಣಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಮುರಗೋಡ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಥಣಿಯ ಯುವಕರ ಪಡೆಯೊಂದು ಪರಿಸರ ಪ್ರೇಮವನ್ನು ಮೆರೆದಿದ್ದಾರೆ.
ಇವತ್ತಿನ ಯುವ ಪೀಳಿಗೆ ವಿಭಿನ್ನ,ವಿಭಿನ್ನವಾದ ಉಡುಗೊರೆಯನ್ನು ತೆಗೆದುಕೊಂಡು ವಧುವರರಿಗೆ ಕೊಟ್ಟು ಶುಭಾಶಯ ಹೇಳುತ್ತಾರೆ, ಆದರೆ ಈ ಯುವಪಡೆಯೊಂದು ವಧುವರರಿಗೆ ಗಿಡವನ್ನು ಉಡುಗೊರೆಯಾಗಿ ನೀಡುವ ಮೂಲಕ ವಧುವರರ ಹಾಗೂ ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಪರಿಸರವನ್ನು ಬಿಟ್ಟು ಮಾನವ ಜೀವನ ಸಾಧ್ಯವೇ ಇಲ್ಲ ಆದರೆ ಇಂದು ಮನುಷ್ಯ ತನ್ನ ಸುಖಕ್ಕಾಗಿ ಪರಿಸರ ವನ್ನು ದುರ್ಬಳಕೆ ಮಾಡುತ್ತಿದ್ದಾನೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.
ಈ ಸಂದರ್ಭದಲ್ಲಿ ಮದುವೆ ಸಮಾರಂಭದಲ್ಲಿ ಆಗಮಿಸಿ ಮಾತನಾಡಿದ ಹಿರಿಯರು ರಚನಾತ್ಮಕವಾದ ಸಾಮಾಜಿಕವಾದಂತಹ ಅತಿ ಉಪಯುಕ್ತ ಅತಿ ಅವಶ್ಯಕವಾಗಿರುವಂತಹ ಗಿಡಗಳನ್ನು ಕೊಡುವ ಮೂಲಕ ಗಿಡಗಳನ್ನು ನೀಡುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಸಾಮಾಜಿಕವಾಗಿ ಈ ಕಾರ್ಯ ಮಾಡುವುದರ ಜೊತೆಗೆ ಧಾರ್ಮಿಕವಾಗಿ ಧರ್ಮದ ಆಚರಣೆಗಳನ್ನು ಕಾಪಾಡಿಕೊಳ್ಳುವ ಮೂಲಕ ಧರ್ಮದ ಅಂತಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಬಾಯವಾಗಿ ಇಂತ ಕಾರ್ಯಗಳನ್ನು ಮಾಡುವ ಮುಖೇನ ಸಮಾಜದ ಸೇವಾ ಕಾರ್ಯಗಳಲ್ಲಿ ಮುಂದಾಗಿದ್ದಾರೆ ವಿಶೇಷವಾಗಿ ಯುವಪಡೆ ಪ್ರಕೃತಿ ಉಳಿಸಲು ಮುಂದಾಗಿರುವುದು ತುಂಬಾ ಸಂತೋಷವಾಗಿದೆ, ಈ ಯುವಪಡೆ ನಿಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ವಧು ವರರಾದ ಸಿದ್ರಾಮ ಜೊತೆ ರೇಣುಕಾ, ಲಕ್ಷಣ ಮಡಿವಾಳ, ರಾಕೇಶ ಮಗದುಮ್ಮ,ಅಕ್ಷಯ ಮಡಿವಾಳ, ಮಲ್ಲಿನಾಥ ನಾಯಿಕ, ಮಹೇಶ ಬಕಾರಿ, ಸಿದ್ದಪ್ಪಾ ಮದ್ದನ್ನವರ, ವಿಶ್ವನಾಥ ಹರೋಲಿ, ಹಾಗೂ ಇನ್ನಿತರರು ಹಾಜರಿದ್ದರು.