ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನಲ್ಲಿ ಬರುವ ಎಲ್ಲಾ ರೈತರ ಜಮೀನುಗಳ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ.ಏಕಾಏಕಿ ಕಾಲುವೆಗೆ ನೀರು ಬರುವುದನ್ನು ನಿಲ್ಲಿಸಿದ್ದಾರೆ.ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ವಾರಬಂದಿ ಪ್ರಕಾರ ನೀರು ಸರಬರಾಜು ಮಾಡಬೇಕು ಜಮೀನಿನಲ್ಲಿರುವ ಜೋಳ,ಕಡಲೆ,ಹತ್ತಿ, ಮೆಣಸಿನಕಾಯಿ,ಸೇಂಗಾ,ಸೂರ್ಯಕಾಂತಿ,ಸಜ್ಜೆ, ಹಾಗೂ ತರಕಾರಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ.ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರ ಕಷ್ಟದ ಕಡೆ ಗಮನಹರಿಸಿ
ಒಂದು ವೇಳೆ ೫/೧೩/೨೦೨೨ ವರೆಗೆ ನೀರು ಬರುವುದನ್ನು ತಡೆದರೆ ಮುಂದಿನ ದಿನಗಳಲ್ಲಿ ತಾಲೂಕಿನ ರೈತ ಬಾಂಧವರು ಮತ್ತು ನಮ್ಮ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಬಣದ ಹಾಗೂ ಶ್ರೀ ದೇವಿಂದ್ರಪ್ಪ.ವಾಯ್.ಕೋಲ್ಕಾರ್ ತಾಲೂಕ ಅಧ್ಯಕ್ಷರು ಮತ್ತು ಎಲ್ಲಾ ರೈತ ಬಾಂಧವರು ಸೇರಿ ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.