ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ:ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ(ರಿ‌.) ಹನೂರು ತಾಲ್ಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮದ ವೇಳೆ ಮಾತಾನಾಡಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು
ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಮಾಹಿತಿ ನೀಡುವ ಮೂಲಕ ಅತ್ಯಂತ ಪ್ರಭಾವ ಶಾಲಿಯಾಗಿ ಜನರ ನಡುವೆ ಇದೆ. ಜನರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ, ಸಂವಿಧಾನದ ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕಾ ರಂಗ ಮಹತ್ವ ವನ್ನು ಪಡೆದಿದೆ.ಇಲ್ಲಿನ ಕರ್ನಾಟಕ ಪತ್ರಕರ್ತರ ಸಂಘ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹದೇಶ್ವರಬೆಟ್ಟ ಸಾಲೂರು ಬೃಹನ್ ಮಠದ
ಶ್ರೀ ಶಾಂತ ಮಲ್ಲಿಕಾರ್ಜುನ ಶ್ರೀಗಳು ಮಾತಾನಾಡಿ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದತ್ತ ಪಾದರ್ಪಣೆ ಮಾಡಿರುವ ಕರ್ನಾಟಕ ಪತ್ರಕರ್ತರ ಸಂಘ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಪ್ರಪಥಮವಾಗಿ ಉದ್ಘಾಟನೆ ಆಗುತ್ತಿರುವುದು ಸಂತಸಕರದ ವಿಷಯವಾಗಿದೆ ಸಂಘದ ದೇಯ್ಯೊದ್ದೇಶಗಳನ್ನು ಗಮನಿಸಿದರೆ ಪ್ರತಿಕಾ ವಿತರಕ ಸೇರಿ ಪತ್ರಿಕಾ ಏಜೆಂಟ್ ಗಳು ವರದಿಗಾರರಿಗೂ ವಿಮಾ ಸೌಲಭ್ಯ ಸೇರಿದಂತೆ ಪ್ರತಿಯೊಬ್ಬ ಸದಸ್ಯನಿಗೂ ಸಾಕಷ್ಟು ಭದ್ರತೆ ಸೌಲಭ್ಯಗಳು ದೊರೆಯುತ್ತಿರುವುದು ಪತ್ರಿಕಾ ರಂಗದ ಬಳಗಕ್ಕೆ ಒಳ್ಳೆಯ ಬೆಳವಣಿಗೆ ಎಂದು ಆಭಿಪ್ರಾಯ ಪಟ್ಟರು
ಬಳಿಕ ಕರ್ನಾಟಕ ಪತ್ರಿಕಾ ಸಂಘದ ರಾಜ್ಯಾಧ್ಯಕ್ಷ ಶ್ರೀ ಮುರುಗೇಶ್ ಶಿವಪೂಜಿ ಮತನಾಡಿ ಕರ್ನಾಟಕ ಪತ್ರಕರ್ತರ ಸಂಘವು ದೆಹಲಿಯ ಇಂಡಿಯನ್ ಜನರ್ಲಿಸ್ಟ್ ಯೂನಿಯನ್ ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿದ್ದು ರಾಷ್ಟ್ರ ಮಟ್ಟದಲ್ಲಿ ಸಂಘ ಗುರುತಿಸಿಕೊಂಡಿದೆ ನಮ್ಮ ಸಂಘದಲ್ಲಿ ಸದಸ್ಯತ್ವವನ್ನು ತೆಗೆದುಕೊಂಡ ಸದಸ್ಯರುಗಳಿಗೆ ಅಂದರೆ ಪತ್ರಿಕಾ ವಿತರಕ,ಪತ್ರಿಕಾ ಏಜೆಂಟ್ ,ಪತ್ರಿಕಾ ವರದಿಗಾರ ಹಾಗೂ ಪತ್ರಿಕ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಹ 4 ಲಕ್ಷ ರೂ ಅಪಘಾತ ವಿಮೆಯ ಸಮಾಜಿಕ ಭದ್ರತೆ ಸೌಲಭ್ಯವಿದೆ ಸುಮಾರು ಎಂಟು ಜನ ಟ್ರಸ್ಟಿಗಳು ಸೇರಿಕೊಂಡು ಒಂದು ನಿಧಿಯನ್ನು ಸ್ಥಾಪಿಸಿ ಸದಸ್ಯತ್ವ ಪಡೆದ ಸದಸ್ಯರುಗಳಿಗೆ ಆಕಸ್ಮಿಕ‌ ದುರಂತಗಳು ಸಂಭವಿಸಿದ್ದಲ್ಲಿ ನಿಧಿಯ ಹಣವನ್ನು ವಿನಿಯೋಗಿಸಲಾಗುತ್ತಿದೆ ಆಲ್ಲದೆ ಸಮಾಜದಲ್ಲಿ ಸಂಘಟನೆಗಳು ಎಷ್ಟು ಇದೆ ಎಂಬುದು ಮುಖ್ಯವಲ್ಲ ಸಂಘಟನೆಗಳಿಂದ ಸದಸ್ಯರಿಗೆ ಏನು ಭದ್ರತೆ ಸೌಲಭ್ಯ ದೊರೆಯುತ್ತದೆ ಎಂಬುದೇ ಮುಖ್ಯ ಎಂದು ತಿಳಿಸಿದರು
ಇದೇ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜಕೀಯ‌ಕ್ಷೇತ್ರದಲ್ಲಿ ಮರಗದಮಣಿ,ಸಮಾಜಸೇವೆ ಅಡಿಯಲ್ಲಿ ಕೃಷ್ಣೇಗೌಡ
ಪಿ ಎಚ್ ಡಿ ಪದವೀಧರ ಡಾ‌.ಚಂದ್ರಪ್ಪ ಪರಿಸರ ಪ್ರೇಮಿ ವಕೀಲ ವೆಂಕಟೇಶ್ , ನರ್ಗಿಸ್ ಆಲಿಖಾನ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಸನ್ಮಾನಿಸಿದ ಗೌರವಿಸಲಾಯಿತು
ಇತ್ತೀಚಿಗೆ ಜಿಲ್ಲಾ ಹಿರಿಯ ಪತ್ರಕರ್ತ ರೆಹಮಾನ್ ನಿಧನದ ಹಿನ್ನೆಲೆ ಒಂದು ನಿಮಿಷಗಳ ಕಾಲ ಮೌನಚರಣೆ ನಡೆಸಲಾಯಿತು
ಕಾರ್ಯಕ್ರಮಕ್ಕೂ ಮುನ್ನ ಸಾಲೂರುಶ್ರೀಗಳು ಜೆಡಿಎಸ್ ರಾಜ್ಯ ಉಪಾದ್ಯಕ್ಷ ಮಂಜುನಾಥ್ ಕಚೇರಿ ಉದ್ಘಾಟಿಸಿದರು
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದ್ರಮ್ಮ ಉಪಾಧ್ಯಕ್ಷ ಗಿರೀಶ್ ಸದಸ್ಯರಾದ ಹರೀಶ್,ಮಹೇಶ್ ,
ಮಹೇಶ್ ನಾಯ್ಕ್,ಮುಮ್ತಾಜ್ ಭಾನು, ಡಿವೈಎಸ್ಪಿ ಮಹಾನಂದ್ ಪೊಲೀಸ್ ಇನ್ಸ್ಪೆಕ್ಟರ್
ಸಂತೋಷ್ ಕಶ್ಯಪ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಾವಾದ್ ಅಹಮದ್ , ಮುಖಂಡರಾದ ಕೊಪ್ಪಾಳಿಮಹದೇವ್ , ಮಂಗಲ ಪುಟ್ಟರಾಜು ಪ್ರಜಾಕೀಯ ಮುಖಂಡ ನಾಗರಾಜ್,ಪಕ್ಷೇತರ ಆಭ್ಯರ್ಥಿ ಮುಜಾಮೀಲ್ ಪಾಷಾ,ರೈತ ಸಂಘದ ಅಧ್ಯಕ್ಷರಾದ
ಗೌಡೇಗೌಡ,ಚಂಗಡಿಕರಿಯಪ್ಪ ಹಿರಿಯ ಪತ್ರಕರ್ತರಾದ ವೆಂಕಟೇಗೌಡ ರೂಪೇಶ್ ಕುಮಾರ್,ನಾಗೇಶ್ ,ಪತ್ರಿಕಾ ಸಂಪಾದಕ
ಹೆಚ್ಎಂ ಕೀರ್ತಿಕೇಶ್ವರ್ ,
ಆಮ್ ಆದ್ಮೀ ಪಕ್ಷದ ಮುಖಂಡ ನಾಗೇಂದ್ರ, ಸೇರಿದಂತೆ ಹಲವರು ಹಾಜರಿದ್ದರು.
ವರದಿ-ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ