ಕನ್ನಡವೇ ನನಗೆ ಎಲ್ಲಾ
ಕನ್ನಡಕ್ಕೆ ಹಾನಿ ಉಂಟಾದರೆ
ನಾನಂತೂ ಸಹಿಸೋಲ್ಲ.!!
ಕನ್ನಡವೇ ನನ್ನಯ ಜೀವ
ಕನ್ನಡವು ಬೀರಿದೆ ನನ್ನ ಮೇಲೆ
ಗಾಢವಾದ ಪ್ರಭಾವ.!!
ಕನ್ನಡವೇ ನನ್ನ ಹೆಮ್ಮೆ
ಕನ್ನಡದಿಂದಲೇ ನಾ ಪಡೆದಿರುವೆ
ಅಪಾರವಾದ ಹಿರಿಮೆ.!!
ಕನ್ನಡವೇ ಬಾಳ ಬೆಳಕು
ಕನ್ನಡಕ್ಕಾಗಿಯೇ ಮೀಸಲಿಟ್ಟಿರುವೆ
ನನ್ನ ಸಕಲ ಬದುಕು,.!!
ಕನ್ನಡವೇ ನನ್ನ ಉಸಿರು
ಕಪ್ಪು ಮಣ್ಣಿನ ಈ ಕರುನಾಡೇ
ನಾ ಮೆಚ್ಚಿದ ಊರು.!!
-ಸುನಿಲ್ ಲೇಖಕ್ ಎನ್
ಬೆಂಗಳೂರು