ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 9:00 ಘಂಟೆಯ ಸುಮಾರಿಗೆ ಒಂದು ಅಪಘಾತ ಸಂಭವಿಸುತ್ತದೆ.ಅಪಘಾತಕ್ಕೆ ಈಡಾದ ವ್ಯಕ್ತಿ ಹೆಚ್ ಎ ಧರ್ಮಣ್ಣನನ್ನು ರಾರಾವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.ಆ ಸಂದರ್ಭದಲ್ಲಿ ಯಾವುದೇ ಒಬ್ಬ ವೈದ್ಯರು ಆಗಲಿ,ಸಿಬ್ಬಂದಿಗಳಾಗಲಿ ಇರಲಿಲ್ಲ ಕೆಲ ನಿಮಿಷಗಳ ಬಳಿಕ ಬಂದು ಅಪಘಾತಕೀಡಾದ ವ್ಯಕ್ತಿಯನ್ನು ನೋಡಿ ಭಯಗೊಂಡರು ಯಾವುದೇ ರೀತಿಯಾಗಿ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡದೆ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು ನಂತರ ಆಂಬುಲೆನ್ಸ್ ಚಾಲಕನಿಗೆ ಕರೆ ಮಾಡಿದರು.ಕರೆ ಮಾಡಿದ 30 ನಿಮಿಷಗಳ ತಡವಾಗಿ ಬಂದ ಚಾಲಕ ನಂತರ ಅಪಘಾತಕ್ಕೆ ಈಡಾದ ವ್ಯಕ್ತಿಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಸಿಬ್ಬಂದಿಗಳು ಮತ್ತು ಚಾಲಕನಿಂದ ಸುಮಾರು ಕೆಲ ನಿಮಿಷಗಳ ಕಾಲ ಗಾಯಗೊಂಡ ವ್ಯಕ್ತಿಯನ್ನು ಕಾಯ್ದಿರಿಸಿದ್ದರು ತಡವಾದ ಕಾರಣ ಒಂದು ಅಮಾಯಕ ಜೀವ ಬಲಿ ತೆಗೆದುಕೊಂಡು ಬಿಟ್ಟರು ಎಂಬುವುದು ಸಾರ್ವಜನಿಕರ ಆರೋಪವಾಗಿದೆ.ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾರಾವಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯ ಕೆಲವೊಂದು ಕುಂದು ಕೊರತೆಗಳನ್ನು ಸರಿಪಡಿಸುವಂತೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ ಸಮಯಕ್ಕೆ ಸರಿಯಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಮತ್ತು ಚಾಲಕನ ಕೊರತೆ,ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸದೆ ಇರುವುದು ರೋಗಿಗಳಿಗೆ ಪ್ರತಿಯೊಂದು ಔಷಧಿಯನ್ನ ಹೊರಗಡೆ ತರಿಸುವುದು ಇವುಗಳು ಸಾರ್ವಜನಿಕರ ಆರೋಪವಾಗಿರುತ್ತದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.