ಕನಕಗಿರಿ: ನ.೨೯ಕ್ಕೆ ೬೭ನೇ ಕನ್ನಡ ರಾಜ್ಯೋತ್ಸವ
ಕನಕಗಿರಿ:ತಾಲೂಕಿನ ಕನಕಾಚಲಪತಿ ದೇವಸ್ಥಾನದ ಹತ್ತಿರದ ಅಂಜನಾದ್ರಿ ವೇದಿಕೆಯಲ್ಲಿ ನ.೨೯ರಂದು ಮಂಗಳವಾರ ಸಂಜೆ ೫ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾ ಹಾಗೂ ಕನಕಗಿರಿ ತಾಲೂಕು ಘಟಕದಿಂದ ೬೭ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಹಾಗೂ ಕನ್ನಡ ರಸಮಂಜರಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಹಾಗೇ ಕನ್ನಡ ಚಲನಚಿತ್ರ ಹಾಗೂ ಧಾರವಾಹಿ ಕಲಾವಿದರಿಂದ ಹಾಸ್ಯ ಮತ್ತು ನೃತ್ಯಕಾರ್ಯಕ್ರಮ, ಕನ್ನಡಕ್ಕೆ ಸೇವೆ ಸಲ್ಲಿಸಿದ ಗಣ್ಯಮಾನ್ಯರಿಗೆ ಕನ್ನಡ ಶಿಖಾಮಣಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ.
ಈ ಕಾರ್ಯಕ್ರಮದ ದಿವ್ಯಸಾನಿಧ್ಯ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ, ಕನಕಗಿರಿ ವಿರಕ್ತಮಠದ ಡಾ.ಚೆನ್ನಮಲ್ಲ ಸ್ವಾಮಿಗಳು,ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತನವರು,ಅರಳಹಳ್ಳಿ ಬೃಹನ್ಮಠದ ಶರಣಯ್ಯಸ್ವಾಮಿ,ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರಶೆಟ್ಟಿ,ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣುಬಿ.ಗದ್ದಿಗಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗುರು,ಮಾಜಿ ಸಚಿವ ಶಿವರಾಜ ತಂಗಡಿಗಿ ಆಗಮಿಸಲಿದ್ದಾರೆ.
ಹಾಗೆ ತಾಯಿಭುವನೇಶ್ವರಿ ಹಾಗೂ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ,ವಿಶೇಷ ಉಪನ್ಯಾಸ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಶಿಖಾಮಣಿ ಪ್ರಶಸ್ತಿ ಪುರಸ್ಕೃತರು ಹಾಗೂ ಅವರ ಸಾಧನಾ ಕ್ಷೇತ್ರಗಳು ಬಗ್ಗೆ ಉಪನ್ಯಾಸ ಜರುಗಲಿದೆ
ಕಾರ್ಯಕ್ರಮದಲ್ಲಿ ಕನಕಗಿರಿ ತಾಲೂಕು ಅಧ್ಯಕ್ಷ ಶರಣಪ್ಪ ಪಲ್ಲವಿ,ಗೌರವಾಧ್ಯಕ್ಷ ಡಾ.ಅರವಟಗಿಮಠ, ಕನಕಗಿರಿ ನಗರ ಘಟಕದ ಅಧ್ಯಕ್ಷ ಹರೀಶ್ ಪೂಜಾರ್,ತಾಲೂಕು ಉಪಾಧ್ಯಕ್ಷ ಶರಣಪ್ಪ ಸಜ್ಜನ್ ಉಪಸ್ಥಿತಿ ಇರಲಿದ್ದಾರೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.