ಯಾವ ಸಂಗತಿಯೂ ಇದ್ದದ್ದು ಇದ್ದ ಹಾಗೆ ಕಾಣುವುದಿಲ್ಲ.ನಾವು ಅದಕ್ಕೆ ನಮ್ಮದೇ ಆದ ಬಣ್ಣ ಹಚ್ಚಿಯೇ ನೋಡುತ್ತೇವೆ.ವಾಸ್ತವವಾಗಿ ಬಣ್ಣ ಕನ್ನಡಕದ್ದು,ಕಾಣುವುದು ವಸ್ತುವಿನಲ್ಲಿ.
ವಿಮಾನದಲ್ಲಿ ಹಾರುವವನು ಕೆಳಗೆ ಕಂಡಾಗ ಮನೆಗಳೆಲ್ಲ ಬೆಂಕಿಪೆಟ್ಟಿಗೆಗಳಂತೆ ಕಾಣುತ್ತದೆ. ನೆಲದಲ್ಲಿ ನಿಂತು ಮೇಲೆ ಕಂಡಾಗ ವಿಮಾನ ಹಕ್ಕಿಯ ಗಾತ್ರದಲ್ಲಿ ಕಾಣಿಸುತ್ತದೆ.
ಇದ್ದಂತೆ ಕಾಣುವುದಿಲ್ಲ,ಕಂಡಂತೆ ಇರುವುದಿಲ್ಲ.
ನಮ್ಮದು ಸತ್ಯ ಹೌದು,ಆದರೆ ನಮ್ಮದೇ ಸತ್ಯ ಅಲ್ಲ. ಇಷ್ಟು ವಿವೇಕ ಮೂಡಿದರೆ ಜಗಳ ಸುಲಭವಾಗಿ ಪರಿಹಾರವಾಗಿಬಿಡುತ್ತದೆ.
ನಾವು ಕಂಡದ್ದು ಸುಳ್ಳಲ್ಲ,ಆದರೆ ನಮ್ಮ ಕನ್ನಡಕದ ಬಣ್ಣ ಅದರಲ್ಲಿ ಕಂಡಿದೆ,ಪ್ರತಿಯೊಬ್ಬರ ಕನ್ನಡಕಕ್ಕೂ ಅವರವರದ್ದೇ ಬಣ್ಣ,ದಿಣ್ಣ.
ಕನ್ನಡಕ ತೆಗೆದು ನೋಡಲು ಕಲಿಯಬೇಕು.
ಕೆಲವರಿಗೆ ಕನ್ನಡಕ ಕಳಚಿಬಿಟ್ಟರೆ ಒಳಗೆ ಕಣ್ಣೇ ಇರುವುದಿಲ್ಲ,ಮುಖವಾಡ ಕಳಚಿಬಿಟ್ಟರೆ ಒಳಗೆ ಮುಖವೇ ಇರುವುದಿಲ್ಲ.
ಬರಹ- ಈ.ಶಿವರಾಜ್ ಅರಸು