ಯಾವುದೇ ಸಂಬಂಧಕ್ಕೂ ನಂಬಿಕೆಯೇ ಆಧಾರ ನಂಬಿಕೆ ಒಂದು ಸಂಬಂಧವನ್ನು ಬೆಸೆಯುವುದು ಮತ್ತು ಅದೇ ನಂಬಿಕೆ ಸಂಬಂಧವನ್ನು ಕಡಿಯಲೂಬಹುದು ಇಂದಿನ ಮನುಷ್ಯ ಬದುಕಿನ ಜಂಜಾಟದಲ್ಲಿ ಅವನು ನಂಬಿಕೆಯ ಸಂಬಂಧದ ಹುಡುಕಾಟದಲ್ಲಿ ಸೋಲುತಿದ್ದಾನೆ ಒಬ್ಬ ವ್ಯಕ್ತಿ ಒಂದು ಸಾರಿ ನಂಬಿಕೆ ಕಳೆದುಕೊಂಡರೆ ಮತ್ತೆ ಎಂದಿಗೂ ಆ ವ್ಯಕ್ತಿ ನಂಬಲು ಸಾಧ್ಯವೇ ಇಲ್ಲ ಮತ್ತೆಂದಿಗೂ ಆ ಸಂಬಂಧ ಮೊದಲಿನ ಹಾಗೆ ಇರುವುದು ಇಲ್ಲ ಹಿಂದೆ ನಂಬಿಕೆಯೇ ಜೀವನವಾಗಿತ್ತು ಇಂದು ನಂಬಿ ಮೋಸ ಹೋಗುವುದೇ ಜೀವನವಾಗಿದೆ ತಮ್ಮ ಸ್ವಾರ್ಥ ಸಾಧನೆಗಾಗಿ ಇಂದಿನ ಕಾಲದಲ್ಲಿ ನಂಬಿಕೆ ಎನ್ನುವ ಮುಖವಾಡ ಧರಿಸಿ ಸ್ನೇಹ ಎಂಬ ಹೆಸರಲ್ಲಿ ಕಾಲಹರಣಕ್ಕೆ ಬಳಸುವರೇ ಹೆಚ್ಚು ನಂಬಿಕೆ ಕನ್ನಡಿಯ ಹಾಗೆ ಪ್ರತಿಬಿಂಬ ಎಂದೂ ಮೋಸ ಮಾಡುವುದಿಲ್ಲ ಆದರೆ ಒಂದು ಸಾರಿ ಮೋಸ ಹೋದರೆ ಎಂದೂ ಸರಿ ಹೋಗಲ್ಲ ಮೊದಲಿನ ಹಾಗೆ ಇರುವುದೂ ಇಲ್ಲ ಇರೋ ಮೂರು ದಿನ ಒಳ್ಳೆಯ ರೀತಿಯಿಂದ ನಂಬಿಕೆ ಗಳಿಸಿ ಬದುಕುವುದು ಶ್ರೇಷ್ಠ.
-ಮಾನಸ.ಎಂ.ಸೊರಬ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.