ಹನೂರು :ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯ ಸಮೀಪ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಆರ್. ನರೇಂದ್ರ.
ಇದೆ ವೇಳೆ ಮಾತನಾಡಿದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು,5 ಕೋಟಿ ಬಿಡುಗಡೆ ಆಗಿದೆ, ಅದರಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸಿವಿಲ್ ಕಾಮಗಾರಿಗಳಿಗೆ ಸುಮಾರು 2.81 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.
ಜೊತೆಗೆ ಸ್ಮಶಾನ ಅಭಿರುದ್ದಿ, ಶಾಲಾ ಮಕ್ಕಳಿಗೆ ಲ್ಯಾಪ್ಟಾಪ್, ಹಾಗೂ ಸಮುದಾಯ ಭವನ ನಿರ್ಮಾಣಗಳಿಗೆ ಅನುದಾನ ಬರಬೇಕಿದೆ ಸುಮಾರು 35ಲಕ್ಷ ರೂ. ವೆಚ್ಚದಲ್ಲಿ ಪಟ್ಟಣ ಪಂಚಾಯತಿ ಬರುವ ಸೊಪ್ಪಿನ ಕೇರಿ ದೇವಾಂಗ ಪೇಟೆ ಸೇರಿದ ವಾರ್ಡ್ 02ಹಾಗೂ 3ನೇ ವಾರ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಬಿಡುಗಡೆ ಯಾಗಿದೆ ಆದರೆ ಇನ್ನು ಹೆಚ್ಚಿನ ಅನುದಾನ ಬೇಕಾಗಿದೆ,
ಹನೂರು ಹಾಗೂ ಬಂಡಳ್ಳಿ -ಮುಖ್ಯರಸ್ತೆ ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಹಂತದಲ್ಲಿದೆ ಶೀಘ್ರದಲ್ಲಿ ರಸ್ತೆ ಕಾಮಗಾರಿಗೆ ಕೈಗೊಳ್ಳಲಾಗುವುದು, ಹನೂರು ಪಟ್ಟಣದಲ್ಲಿ 75%ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದೆ ಮುಂದಿನ ದಿನ ಗಳಲ್ಲಿ ಹೆಚ್ಚಿನ ಅನುದಾನ ತಂದು ಸಂಪೂರ್ಣ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು, ಆದ್ದರಿಂದ ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿಗಳನ್ನು ಕೈಗೊಂಡು ಉತ್ತಮವಾಗಿ ಕಾಮಗಾರಿಯನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು,
ಈ ಸಂದರ್ಭದಲ್ಲಿ ಪ.ಪಂ, ಅಧ್ಯಕ್ಷ ಚಂದ್ರಮ್ಮ, ಮುಖ್ಯಧಿಕಾರಿ ಮೂರ್ತಿ, ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯರುಗಳಾದ, ಹರೀಶ್, ಸಂಪತ್ ಕುಮಾರ್, ಸೋಮಶೇಖರ್, ಗುತ್ತಿಗೆದಾರ ಅಶೋಕ್, ಮಹೇಶ್, ಮಹೇಶ್ ನಾಯ್ಕ್, ಮಾಜಿ ಉಪಾಧ್ಯಕ್ಷ ಬಸವರಾಜು, ಚಿಕ್ಕ ತಮ್ಮಯ್ಯ ಸೇರಿದಂತೆ ಮುಖಂಡರುಗಳು ಇದ್ದರು. ವರದಿ ಉಸ್ಮಾನ್ ಖಾನ್.