ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನಸಾಗರದ ನಡುವೆ ಮೊಳಗಿದ ಸಹಬಾಳ್ವೆ ಉದ್ಘೋಷ


ವಡಗೇರಾ : ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವದ ಅಂಗವಾಗಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಹಬಾಳ್ವೆ ಸಮಾವೇಶ-ನಾಡಿನ ಸೌಹಾರ್ದತೆ ಪರಂಪರೆಗೆ ಅಕ್ಷರಶಃ ಸಾಕ್ಷಿಯಾಗಿ ಬಹುತ್ವ ಭಾರತವನ್ನು ವೈಭವಯುತವಾಗಿ ಅನಾವರಣಗೊಳಿಸಿತು.
ವಡಗೇರಾ ನಗರದ ಮುಖ್ಯ ರಸ್ತೆಯಲ್ಲಿ ಒಂದೂವರೆ ಗಂಟೆಗೂ ಅಧಿಕ ಕಾಲ ನಡೆದ ಬೈಕ್ ರ್ಯಾಲಿಯಲ್ಲಿ ಜನಸಾಗರವೇ ಹರಿದು ಬಂದಿತ್ತು .ಎಲ್ಲೆಡೆ ಸಹಬಾಳ್ವೆಯ ಘೋಷಣೆ ಮೊಳಗಿತು.
ಸರ್ವ ಜನಾಂಗದ ಶಾಂತಿಯ ತೋಟದಂತೆ ರವಿವಾರ ಮಧ್ಯಾಹ್ನ 12 ಗಂಟೆಗೆ ವಡಗೇರಾ ಪ್ರಮುಖ ರಸ್ತೆಗಳ ಆರಂಭಗೊಂಡಿದ್ದ ಬೈಕ್ ರಾಲಿ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಸಾಗಿ ಸ್ವಾಮಿವಿವೇಕಾನಂದ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು. ದೇಶದ ಮಹಾನ್ ವ್ಯಕ್ತಿಗಳಾದ ಮಹಾತ್ಮಗಾಂಧೀಜಿ, ಡಾ.ಬಿ.ಆರ್.‌ಅಂಬೇಡ್ಕರ್, ಟಿಪ್ಪು ಸುಲ್ತಾನ್,ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು, ಕನಕದಾಸ ಅವರ ಚಿತ್ರಗಳು ಪ್ರತಿಬಿಂಬಿಸುತ್ತಿದ್ದವು.
ಸಹಬಾಳ್ವೆ ಸಮಾವೇಶಕ್ಕೆ ಬೈಕ್ ಗಳಲ್ಲಿ ಸಾಗಿ‌ ಬರುವ ಜನಸಾಗರ ನಡುವೆ ಕೇಸರಿ, ಹಸಿರು, ಕೆಂಪು, ನೀಲಿ, ಬಿಳಿ, ಹಳದಿ ಸಹಿತ ನಾನಾ ಬಣ್ಣಗಳ ದ್ವಜಗಳು , ಕಟೌಟುಗಳನ್ನು ಕಟ್ಟಲಾಗಿತ್ತು.
ಯಾವುದೇ ಅವಘಡ‌‌ ಸಂಭವಿಸದಂತೆ ರಸ್ತೆಯುದ್ದಕ್ಕೂ 100 ಕ್ಕೂ ಅಧಿಕ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.
ದಿವ್ಯಸಾನಿಧ್ಯ ವಹಿಸಿಕೊಂಡು ಕಾರ್ಯಕ್ರಮಉದ್ದೇಶಿಸಿ ಮಾತನಾಡಿದ
ಪೂಜ್ಯಶ್ರೀ ಜ್ಞಾನ ಪ್ರಕಾ ಶ ಮಹಾಸ್ವಾಮೀಗಳು
ಊರಿಲಿಂಗಪೆದ್ದಿ ಮಹಾ ಸಂಸ್ಥಾನ ಮಠ, ಮೈಸೂರ ಅವರು ಮಾತನಾಡುತ್ತ ಟಿಪ್ಪು ಒಬ್ಬ ಮಹಾನ್ ದೇಶಭಕ್ತ ಟಿಪ್ಪುವಿನ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಧಾಖಲೆಗಳು ಇವೆ ಅವುಗಳನ್ನು ಓದಿ ಟಿಪ್ಪು ಯಾರ ಗುಲಾಮ ನಾಗದೆ ಕೇವಲ ದೇಶದ ಜನರಿಗಾಗಿ ಹೋರಾಡಿದ ಪ್ರಬುದ್ಧ ರಾಜನಾಗಿದ್ದ ಹಾಗಾಗಿ ವಡಗೇರಾ ದಲ್ಲಿ ಇಂತಹ ಕಾರ್ಯಕ್ರಮ ನೋಡಿ ತುಂಬ ಖುಷಿಯಾಗಿದೆ ಈ ರೀತಿಯ ಕಾರ್ಯಕ್ರಮಗಳು ಪ್ರತಿ ಜಿಲ್ಲೆ ಪ್ರತಿ ತಾಲೂಕು ಅಷ್ಟೆ ಅಲ್ಲ ಇಡಿ ದೇಶದ ಮೂಲೆ ಮೂಲೆಗಳಲ್ಲಿ ಆಗಬೇಕು.ಕಾರ್ಯಕ್ರಮದ ಸಾನಿಧ್ಯವನ್ನು
ಪೂಜ್ಯಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು
ಶ್ರೀ ಮರುಳ ಶಂಕರ ದೇವರ ಗುರು ಪೀಠ ಚಿಗರಹಳ್ಳಿ,
ಪೂಜ್ಯಶ್ರೀ ಮರಿಸ್ವಾಮಿಗಳು
ಶ್ರೀ ದುರ್ಗಾದೇವಿ ದೇವಸ್ಥಾನ, ಗೋನಾಲ
ಮುಖ್ಯ ಭಾಷಣ ಕಾರರಾದ ಪ್ರಗತಿ ಪರ ಚಿಂತಕರಾದ ಶ್ರೀ ಎ ಜೆ ಖಾನ್ ಅವರು ಮಾತನಾಡುತ್ತ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯಗಳು ಜೀವಂತವಾಗಿಡಲು ನಾವು ಗಟ್ಟಿಯಾಗಿ ಧ್ವನಿಯೆತ್ತ ಬೇಕಾಗಿದೆ.ಈ ಸಹಬಾಳ್ವೆ ಸಮಾವೇಶ ನಿಜಕ್ಕೂ ಇಡಿ ದೇಶಕ್ಕೆ ಮಾದರಿ ಎಂದು ಹೇಳಿದರು. ಸಮಿತಿ ಅಧ್ಯಕರಿಗೆ ಅಭಿನಂದನೆಗಳು ತಿಳಿಸಿದರು
ಕಾರ್ಯಕ್ರಮದ ರೂವಾರಿಗಳಾದ ಶ್ರೀ ಬಾಷುಮಿಯಾ ವಡಗೇರಾ ಅವರು ಕಾರ್ಯಕ್ರಮದ ಅಧ್ಯಕ್ಷತ್ತೆ ವಹಿಸಿಕೊಂಡು ಪ್ರಸ್ತಾವಿಕವಾಗಿ ಮಾತನಾಡುತ್ತಾ ಈ ಕಾರ್ಯಕ್ರಮವನ್ನು ಹಲವು ಆಯಾಮ ಗಳಿಂದ ನಿಲ್ಲಿಸಲು ಪ್ರಯತ್ನ ಪಟ್ಟರು ತಾಲೂಕಿನ ಜನ ಮಾತ್ರ ಯಾವುದಕ್ಕೂ ಕಿವಿಗೋಡದೆ ಸಹೋದರತ್ವ ಸಹಬಾಳ್ವೆಗೆ ಮಹತ್ವ ನೀಡಿ ಸಾಗರದಂತೆ ಬಂದಿದ್ದೀರಿ ಇದು ವಡಗೇರಾ ತಾಲೂಕಿನಲ್ಲಿ ಐತಿಹಾಸಿಕ ಧಾಖಲೆ ಯಾಗಿದೆ ಮುಂದಿನ ದಿನಗಳಲ್ಲಿ ಜನ ಅಭಿರುದ್ದಿಗಾಗಿ ದ್ವನಿಯತ್ತಬೇಕು ಎಂದರು.ಕಾರ್ಯಕ್ರಮದ ಉದ್ಘಾಟನೆ ಸಂವಿಧಾನದ ರಚನಾಪ್ರಶ್ನೆನಡಾವಳಿ ಪುಸ್ತಕ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಮಾನವ ಕುಲ ತಾನೊಂದೆ ವಲಂ ಅನ್ನೋ ವಿಶೇಷ ನಾಮಫಲಕ ಅನಾವರಣಗೊಂಡಿತು
ಒಟ್ಟಾರೆ ಕಾರ್ಯಕ್ರಮ ಶಿಸ್ತಿನಿಂದ ಕುಡಿತ್ತು.
ಕಾರ್ಯಕ್ರಮ ದಲ್ಲಿ ವಿಶೇಷವಾಗಿ
ಅಹಿಂದ ಮುಖಂಡ ಶ್ರೀ ಹನುಮೇಗೌಡ ಬಿರನಕಲ್
ಹಾಗು ಶ್ರೀ ನಿಖಿಲ್ ವಿ ಶಂಕರ್
ರಾಜ್ಯ ಕಾರ್ಯಧರ್ಶಿಗಳು ಯುವ ಕಾಂಗ್ರೆಸ್ ಅವರಿಗೆ ಸನ್ಮಾನಿಸಿಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲೆಯ ರಾಜಕೀಯ ಮುಖಂಡರು ಭಾಗಿಯಾಗಿದ್ದರು.

ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ