ವಡಗೇರಾ : ಭಕ್ತರ ಆರಾಧ್ಯ ದೈವ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಬನದ ರಾಚೋಟೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಶ್ರೀ ಮಠದಲ್ಲಿ ವಿಷೇಶ ಪೂಜೆ ಜರುಗಿದವು. ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂಕಾರ್ಯಗಳು ಶ್ರದ್ಧಾ ಭಕ್ತಿಯಿಂದ ಜರುಗಿತು. ನಂತರ ಭಕ್ತರು ಕಾಯಿ ನೈವೇದ್ಯ ಅರ್ಪಿಸಿದರು.
ಸಾಯಂಕಾಲ 6 ಗಂಟೆಗೆ ಪಟ್ಟಣದ ಬಸವಣ್ಣ ದೇವಸ್ಥಾನ ದಿಂದಾ ಕಳಶದ ಮೇರವಣಿಗೆ ಪುರವಂತಿಗೆ ಯೊಂದಿಗೆ ಪ್ರಾರಂಭವಾಗಿ ಬನದ ರಾಚೋಟೇಶ್ವರ ದೇವಸ್ಥಾನಕ್ಕೆ ತಲುಪಿತು.
ಸಂಜೆ ಶ್ರೀ ಮಠದಿಂದ ಕಲಶಕ್ಕೆ ಮಂಗಳಾರತಿ ಮತ್ತು ಕುಂಬಳಕಾಯಿ ಹೊಡೆದು ಮಹಾರಥೋತ್ಸವ ಶಾಂತಿಯುತವಾಗಿ ಜರುಗಿತು. ಭಕ್ತರು ರಥೋತ್ಸವಕ್ಕೆ ಮಂಡಾಳು, ಉತ್ತುತ್ತಿ, ಹೂ ಅರ್ಪಿಸಿದರು. ಬಾಜಾ ಭಜಂತ್ರಿ, ಪುರುವಂತಿಗೆ ನೃತ್ಯ ಗಮನ ಸೇಳೆಯುತು.
ಜಾತ್ರೆ ಮಹೋತ್ಸವದಲ್ಲಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮುಂಜಾಗ್ರತೆ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾತ್ತು. ರಾಜಕೀಯ ಮುಖಂಡರು, ಊರಿನ ಗಣ್ಯರು, ಮಾಧ್ಯಮ ಮಿತ್ರರು ಭಾಗವಹಿಸಿದರು.