ಸಿರುಗುಪ್ಪ: ತಾಲೂಕಿನ ಸೀಮಾಂಧ್ರ ಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕ ಗ್ರಾಮ ವೆಂಕಟಾಪುರ ಗ್ರಾಮದಲ್ಲಿ ವಯೋ ನಿವೃತ್ತಿಗೊಂಡ ಆದರ್ಶ ಶಿಕ್ಷಕ ಶ್ರೀಧರ ಗದ್ವಾಲರಿಗೆ ಸನ್ಮಾನ ಮತ್ತು ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಏರ್ಪಾಟುಗೊಂಡಿತ್ತು
ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವೆಂಕಟಾಪುರ ಇವರುಗಳ ಸಹಯೋಗದಲ್ಲಿ ದಿ.30ರ ಬುಧವಾರ ಬೀಳ್ಕೊಡುಗೆ ಸನ್ಮಾನ ಸಮಾರಂಭ ಏರ್ಪಾಡಾಗಿತ್ತು
ಜ್ಯೋತಿ ಪ್ರಜ್ವಲಿಸುವಿಕೆ ಮೂಲಕ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾಮ ಬಸವರಾಜ ಶಾಸ್ತ್ರಿಗಳು ವೇದಿಕೆಯ ಗಣ್ಯರೊಂದಿಗೆ
ಜ್ಯೋತಿ ಬೆಳಗಿಸಿ ನೆರವೇರಿಸಿದರು.
ಈ ವೇಳೆ ಅವರು ವೇದಿಕೆ ಉದ್ದೇಶಿಸಿ ಮಾತನಾಡಿ ಗುರುಸೇವೆ ಎಂಬುದು ದೇವರ ಸೇವೆಗಿಂತಲೂ ಮಿಗಿಲಾದದು. ಆದ್ದರಿಂದ ಈ ಕಾರ್ಯಕ್ರಮ ನನಗೆ ಸಂತಸ ತಂದಿದೆ. ಹಿರಿಯರು ಹೇಳುವಂತೆ ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ , ಗುರುಗಳು ಇದ್ದರೇನೇ ಅವರ ಮುಖಾಂತರ ಎಲ್ಲವೂ ನಮಗೆ ಲಭಿಸುತ್ತದೆ ಆದ್ದರಿಂದ ಗುರುಸೇವೆ ಮತ್ತು ಗುರುಗಳನ್ನು ಸನ್ಮಾನಿಸುವುದು ದೈವತ್ವದ ಕೆಲಸವಾಗಿದೆ. ಇಂದು ವಯೋನಿವೃತ್ತಿ ಹೊಂದುತ್ತಿರುವ ಶಿಕ್ಷಕ ಶ್ರೀಧರ ರಿಗೆ ಇದು ಮರುಜನ್ಮವಾಗಿದ್ದು ನಿವೃತ್ತಿ ಜೀವನದ ಹುಟ್ಟು ಇದಾಗಿದೆ. ಇಂದಿನಿಂದ ಅವರ ಅನೇಕ ಜೀವನದ ಶೈಲಿಗಳು ಬದಲಾಗುತ್ತವೆ. ದೇವರು ಅವರಿಗೂ ಮತ್ತು ಅವರ ಕುಟುಂಬದವರಿಗೂ ಆರೋಗ್ಯ ಹಾಗೂ ಎಲ್ಲವನ್ನು ನೀಡಲಿ ಎಂದು ಹರಸಿದರು
ಬೀಳ್ಕೊಡುಗೆಯ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಮ ಶ್ರೀಕಂಠಯ್ಯ ಶಾಸ್ತ್ರಿ, ಕ್ಲಸ್ಟರ್ ಮಟ್ಟದ ಅಧಿಕಾರಿಗಳು, ಅತಿಥಿಗಳು ಗಣ್ಯರು ಬದನೆಹಾಳು ಸಕ್ರಪ್ಪ, ಸಿ.ಆರ್.ಪಿ ರಾಮಚಂದ್ರಪ್ಪ ಕೆ. ವಾಯುಮಾಲಿನ್ಯ ನಿಯಂತ್ರಣಧಿಕಾರಿ ಹೆಚ್. ರಾಜ ಕರ್ನಾಟಕ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಎಂ.ಡಿ. ಶೇಕ್ಷಾವಲಿ ಮತ್ತು ಇತರರು ನಿವೃತ್ತಿ ಶಿಕ್ಷಕರ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಮನದಾಳದ ಮಾತುಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ನಾಡಂಗ, ನಾಗರಹಾಳು, ಅಲಬನೂರು, ವೆಂಕಟಾಪುರ, ಇಟಿಗೆಹಾಳು ಮತ್ತು ಇತರೆ ಗ್ರಾಮದ ಶಾಲೆಗಳ ಮುಖ್ಯ ಗುರುಗಳು, ಸಹ ಶಿಕ್ಷಕರು, ವೆಂಕಟಾಪುರ ಗ್ರಾಮದ ರೈತರು ಹೀಗೆ ಎಲ್ಲರೂ ಸೇರಿ ನಿವೃತ್ತ ಶ್ರೀಧರ ಗದ್ವಾಲರಿಗೆ ಅಭಿನಂದನೆ ಮತ್ತು ಗೌರವ ಸಮರ್ಪಣೆಯನ್ನು ಸಲ್ಲಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು