ಕೊರೋನಾ ಮಾಡಿದ ಕಿತಾಪತಿ ಇದು ನನ್ನ ಮೊದಲ ಕೃತಿ ಇದೊಂದು ಹಾಸ್ಯ ನಾಟಕ ಇದರ ಹೆಸರೇ ಸೂಚಿಸುವಂತೆ ಕೊರೋನಾ ಕಾಲದ ಕಥನವನ್ನು ಹಾಸ್ಯದ ಜೋತೆಗೆ ವಿಡಂಬನೆ,
ಕೊರೋನಾ ಕಾಲದ ಸಂದರ್ಭದಲ್ಲಿ ಇಡೀ ದೇಶವೇ ಲಾಕ್ ಡೌನ್ ಹಸರಿನಲ್ಲಿ ಸ್ತಬ್ದವಾದಾಗ,ಎದುರಾದ ಅರ್ಥಿಕ ಬಿಕ್ಕಟ್ಟು,ವಲಸೆ ಬಂದ ಕೂಲಿ ಕಾರ್ಮಿಕರ ಆತಂಕ,ದಿನದೊಪ್ಪತ್ತಿನ ಕೂಳಿಗಾಗಿ ಪರದಾಡುವ ಬಡಪಾಯಿಗಳ ದೈನೇಸಿ ಸ್ಥಿತಿ, ಇದೆಲ್ಲವೂ ಈ ಶತಮಾನದ ಕಂಡಂತಹ ಅತ್ಯಂತ ಕಷ್ಟದ ಕಾಲ ಎಂದೇ ಹೇಳಬಹುದು.ಅಂತಹ ಅಸಹಾಯಕ ದಿನಗಳ ನೋವನ್ನ,ಅ ನೋವಿನಲ್ಲೂ ಮನುಷ್ಯನ ಸಣ್ಣತನ,ಸ್ವಾರ್ಥದ ಲಾಲಸೆಯನ್ನು ಲೇಖಕನಾದ ನಾನು ಸೂಕ್ಷ್ಮ ಸಂವೇದನೆಯ ಮೂಲಕ ಚಿತ್ರಿಸಲು ಪ್ರಯತ್ನಿಸಿದ್ದೇನೆ.
ಈ ಕೊರೋನಾ ಕ್ರೌರ್ಯದಿಂದ ಎಷ್ಟೋ ಮುಗ್ದ ಜೀವಿಗಳ ಬದುಕು ನಲುಗಿ ಹೋಗಿದೆ.ಇದು ನಮ್ಮೆಲ್ಲರ ಮನಸ್ಸನ್ನು ಘಾಸಿಗೊಳಿಸಿದೆ ಹಣ ಆಸ್ತಿಗಳ ದಬ್ಬಾಳಿಕೆ ಮತ್ತು ನಾನು ನನ್ನದು ನನ್ನಿಂದಲೇ ಎನ್ನುವ ಅಹಂಕಾರ ಮನುಷ್ಯನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಸಂಕ್ಷಿಪ್ತವಾಗಿ ವಿವರಿಸಿದೆ
ಈ ನಾಟಕದ ಇನ್ನೊಂದು ವಿಶೇಷವೆಂದರೆ ಕೊರೋನಾವನ್ನೇ ಒಂದು ಪಾತ್ರವಾಗಿ ಚಿತ್ರಿಸಿ, ಆ ಪಾತ್ರದ ಮೂಲಕ ಮನುಷ್ಯನ ಮಾಡಿದ ತಪ್ಪಿಗೆ,ಅವನ ಅಜಾಗರೂಕತೆಗೆ ನನ್ನನ್ನುಯಾಕೆ ನಿಂದಿಸುತ್ತೀರ?
ನಿಮ್ಮಆರೋಗ್ಯದ ಬಗ್ಗೆ ಕಾಳಜಿ ಇಲ್ಲಾಂದ್ರೆ ನಾನೇನು ಮಾಡಲಿ? ಎಂದು ಪ್ರಶ್ನಿಸುವುದರ ಮೂಲಕ ನಮ್ಮ ಅಸಡ್ಡೆಯನ್ನ ಅಹಂಕಾರವನ್ನು ಅಣುಕಿಸುತ್ತಾ ಸಾಗುವ ಕೊರೋನಾ ಮನುಷ್ಯನನ್ನು ಆತ್ಮವಲೋಕನಕ್ಕೆಈಡು ಮಾಡುತ್ತದೆ.
ಒಟ್ಟಾರೆಯಾಗಿ ಒಂದು ಕಾಲದ ನೋವು-ನಲಿವುಗಳನ್ನ,ಸಣ್ಣತನ- ಸಂಕೋಚಗಳನ್ನು ಹತ್ತು ದೃಶ್ಯಗಳಲ್ಲಿ ನವಿರಾಗಿ ಕಟ್ಟಿ ಕೊಟ್ಟಿರುವ ಯುವ ಲೇಖಕನಾದ ನನಗೆ ನಿಮ್ಮ ಆಶಿರ್ವಾದ ಮತ್ತು ಹಾರೈಕೆಗಳೇ ನನ್ನ ಮುಂದಿನ ಸಾಹಿತ್ಯ ಸೇವೆಗೆ ದಾರಿದೀಪ.
ಪುಸ್ತಕಗಳಿಗಾಗಿ ಸಂಪರ್ಕಿಸಿ
ನನ್ನ ವಿಳಾಸ—ವಿ.ಶ್ರೀನಿವಾಸ.c/0
ಸಿಸ್ಕಾನ್ ಇಂಸ್ಟ್ರಮೆಂಟ್ಸ್,ಪ್ರೈವೇಟ್ ಲಿಮಿಟೆಡ್.
ನಂ 66,1ನೇ ಹಂತ
ಹೊಸೂರು ರಸ್ತೆ,ಪೋಲಿಸ್ ಠಾಣೆ ಹತ್ತಿರ ,ಎಲೆಕ್ಟ್ರಾನಿಕ್ಸ್ ಸಿಟಿ,ಬೆಂಗಳೂರು 560100
ಮೊಬೈಲ್ ಸಂಖ್ಯೆ—7795178158
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.