ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಐತಿಹಾಸಿಕ ಗ್ರಾಮ ರಾರಾವಿಯಲ್ಲಿ ಅಪಘಾತಕ್ಕೆ ಈಡಾದ ವ್ಯಕ್ತಿ ಹೆಚ್. ಧರ್ಮಣ್ಣ ಇವರಿಗೆ ರಾರಾವಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣ ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣಕ್ಕಾಗಿಯೇ ಗುಣಮುಖವಾಗ ಬೇಕಿದ್ದ ಯುವಕ ದುರ್ಮರಣ ಹೊಂದಿದ್ದಾನೆಂದು ಕುಟುಂಬದವರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯಾಧಿಕಾರಗಳ ಗಮನಕ್ಕೆ ತಿಳಿಸಿರುವುದಾಗಿ ತಿಳಿದು ಬಂದಿದೆ
ರಾರಾವಿಯಲ್ಲಿ ಭತ್ತದ ಹುಲ್ಲನ್ನು ಟ್ರ್ಯಾಕ್ಟರಿನಲ್ಲಿ ಹೇರಿಕೊಂಡು ಶಂಭುಲಿಂಗ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಟ್ರಾಲಿಯಲ್ಲಿನ ಹುಲ್ಲು ಧರ್ಮಣ್ಣನಿಗೆ ಬಡಿದು ಸ್ವಲ್ಪ ದೂರ ಎಳೆದೊಯ್ದ ಪರಿಣಾಮ ತಲೆಯ ಹಿಂಬದಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ವೇಳೆ ಈತನ ಜೊತೆಗಿದ್ದ ತಮ್ಮ ರಂಗಸ್ವಾಮಿಗೂ ಸಣ್ಣ ಪುಟ್ಟ ಏಟುಗಳು ಬಿದ್ದಿದ್ದು ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸುತ್ತಲೇ ತಕ್ಷಣ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಕರಿದೊಯ್ಯಲಾಗಿದೆ ಆಸರೆ ಈ ಸಂದರ್ಭದಲ್ಲಿ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ಇರಲಿಲ್ಲ ಕೆಲ ನಿಮಿಷಗಳ ಬಳಿಕ ಬಂದು ಅಪಘಾತಕ್ಕೀಡಾದ ವ್ಯಕ್ತಿಯನ್ನು ನೋಡಿ ಭಯಗೊಂಡು ಪ್ರಥಮ ಚಿಕಿತ್ಸೆ ನೀಡದೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆಂಬುಲೆನ್ಸ್ ಚಾಲಕನಿಗೆ ಕರೆ ಮಾಡಿದ ನಂತರದ 30 ನಿಮಿಷಗಳ ತಡವಾಗಿ ಬಂದು ಸಿರುಗುಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಇದರಿಂದ ಅಸ್ಪತ್ರೆಯ ಸಿಬ್ಬಂದಿಗಳಿಂದ ಗಾಯಗೊಂಡ ವ್ಯಕ್ತಿಗೆ ತಕ್ಷಣದ ಸೂಕ್ತ ಸಿಗದಿರುವುದೇ ವ್ಯಕ್ತಿಯ ಸಾವಿಗೆ ಕಾರಣವೆಂಬುದು ಸಾರ್ವಜನಿಕರ ಆರೋಪವಾಗಿದೆ.
ಮೃತ ಧರ್ಮಣ್ಣನ ಪತ್ನಿ ನೀಲಮ್ಮ ಈ ಸಂಭಂಧವಾಗಿ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗುತ್ತಿದೆ