ಕೊಪ್ಪಳ/ಕಾರಟಗಿ:ಅಖಂಡ ಗಂಗಾವತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕುಗಳ ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿಗಳು ಹಲವು ವರ್ಷಗಳಿಂದ ವರ್ಷಗಳಿಂದ ರೈತರ ಸಹಕಾರ ಸಂಘದಲ್ಲಿ ಸೇವೆ ಒದಗಿಸುತ್ತಾ ಬಂದಿದ್ದು, ಸರಕಾರದಿಂದ ಯಾವುದೇ ಸೇವಾ ಭದ್ರತೆ ಒದಗಿಸಿಲ್ಲ ಅಲ್ಲದೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಆದ್ದರಿಂದ ನಮ್ಮ ಸೇವೆಯನ್ನ ಗುರುತಿಸಿ ಸರ್ಕಾರ ಸೇವ ಭತ್ಯೆ ಮತ್ತು ಇನ್ನುಳಿದ ಸೌಲಭ್ಯಗಳನ್ನು ಒದಗಿಸಬೇಕೆಂದು ಮತ್ತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿ ಸರಕಾರದ ಗಮನಕ್ಕೆ ತಂದು ಸೌಲಭ್ಯವನ್ನು ಒದಗಿಸಬೇಕೆಂದು ಕನಕಗಿರಿ ಶಾಸಕರಾದ ಬಸವರಾಜ ದಡೆಸೂಗುರು ಇವರಿಗೆ ಮನವಿ ಸಲ್ಲಿಸಿದರು ನಂತರ ಶಾಸಕ ಬಸವರಾಜ್ ದಡೆಸುಗೂರು ಮಾತನಾಡಿ ಪ್ರಾಮಾಣಿಕವಾಗಿ ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗನೆ ನಿಮಗೆ ಸರ್ಕಾರದ ಸೌಲಭ್ಯ ದೊರಗಿಸಿಕೊಡುತ್ತೇನೆ ಎಂದರು ಸಂದರ್ಭದಲ್ಲಿ ಅಖಂಡ ಗಂಗಾವತಿ ತಾಲೂಕು ಕೃಷಿ ಪತ್ತಿನ ಸಹಕಾರದ ಸಂಘದ ಕಾರ್ಯದರ್ಶಿಗಳು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.