ವಿಧಾನ ಪರಿಷತ್ ಸದಸ್ಯರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಹೋಬಳಿ ಮಟ್ಟದಲ್ಲಿ ವಿಶ್ವಕರ್ಮ ಸಂಘಟನೆಯನ್ನು ಬಲಪಡಿಸಲು ಸಿರಗುಪ್ಪ ತಾಲೂಕಿಗೆ ಆಗಮಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಸಿರಗುಪ್ಪ ತಾಲೂಕ ಅದ್ಯಕ್ಷ ಹೆಚ್ ಮೌನೇಶ ಆಚಾರ್ಯ ತಿಳಿಸಿದರು.
ಸಿರಗುಪ್ಪ ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದ ನಾಯಕರಾಗಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ. ಪಿ.ನಂಜುಂಡಿ ವಿಶ್ವಕರ್ಮ ಅವರು ವಿಶ್ವಕರ್ಮ ಸಮಾಜದ ಬಂಧಗಳನ್ನು ಒಗ್ಗೂಡಿಸಿ ಸಮಾಜವನ್ನು ಸಾಮಾಜಿಕವಾಗಿ ಆರ್ಥಿಕವಾಗಿ,ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ವಿಶ್ವಕರ್ಮ ಸಮಾಜದ STಮೀಸಲಾತಿ ಹೋರಾಟದ ಬಗ್ಗೆ ಜಾಗೃತಗೊಳಿಸಲು ರಾಜ್ಯಾದ್ಯಂತ ಹೋಬಳಿ ಮಟ್ಟದ ವಿಶ್ವಕರ್ಮ ಜನಜಾಗೃತಿ ಸಮಾವೇಶಗಳನ್ನು ಮಾಡುತ್ತಿದ್ದಾರೆ ಅದರ ಭಾಗವಾಗಿ ಈಗಾಗಲೇ ರಾಜ್ಯಾದ್ಯಂತ 115 ಜನಜಾಗೃತಿ ಸಭೆಗಳನ್ನು ನೆಡಸಲಾಗಿದೆ.ಸಿರಗುಪ್ಪ ತಾಲೂಕಿನಲ್ಲಿ ಕೂಡ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಡಿಸೆಂಬರ್ 25 ರಂದು ಬೆಳಗ್ಗೆ 10 ಗಂಟೆಗೆ ಸಿರಗುಪ್ಪ ತಾಲೂಕಿ ನಿರೀಕ್ಷಿಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವರು ನಂತರ ಬೆಳಗ್ಗೆ 11ಗಂಟೆಗೆ ಕರೂರು ಹೋಬಳಿ 116ನೇ ಜನಜಾಗೃತಿ ಸಭೆ,ಮದ್ಯಾಹ್ನ 2ಗಂಟೆಗೆ ಶಿರಗೇರಿ ಹೋಬಳಿ 117 ನೇ ಜನಜಾಗೃತಿ ಸಭೆ,ಹಾಗೂ ಸಂಜೆ 4ಗಂಟೆಗೆ ತೆಕ್ಕಲಕೋಟೆ ಹೋಬಳಿಗಳಲ್ಲಿ ನಡೆಯುವ 118ನೇ ಜನಜಾಗೃತಿ ಸಭೆಗಳಲ್ಲಿ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಭಾಗವಹಿಸಲಿದ್ದಾರೆ ನಂತರ ಸಿರಗುಪ್ಪ ತಾಲೂಕಿನ ಮುಖಂಡರ ಜೊತೆ ಚರ್ಚಿಸಿ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿರಗುಪ್ಪ ತಾಲೂಕ ವಿಶ್ವಕರ್ಮ ಸಮಾಜದ ಗೌರವ ಅದ್ಯಕ್ಷರಾದ ಬಿ.ಷಣ್ಮುಖ ಆಚಾರ್ಯ,ಮಹಾಸಭಾ ತಾಲೂಕ ಅದ್ಯಕ್ಷ ಹೆಚ್.ಮೌನೇಶ ಆಚಾರ್ಯ,ಬಿ.ಮಲ್ಲಿಕಾರ್ಜುನ ಆಚಾರ್ಯ, ಶಿವಪ್ಪ ಆಚಾರ್ಯ, ಹನುಮೇಶ,ಮೌನೇಶ ನಾಗಲಾಪೂರ,ಸುರೇಶ ಶಿಲ್ಪಿ, ಇನ್ನೂ ಹಲವಾರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.