ತಿಳಿಯದೆ
ಕುಗ್ಗಿದೆ ನನ್ನ ಮನಸ್ಸು
ಯಾವುದು
ತಪ್ಪು ಸರಿ ಎಂದು
ಮೌನವಾಗಿ
ಕುಗ್ಗಿದೆ ನನ್ನ ಮನಸ್ಸು
ನಿನ್ನ ಎದುರು ಮಾತು
ವ್ಯರ್ಥವೆಂದನಿಸಿದಾಗ
ವಂಚನೆಯಲ್ಲಿ
ಕುಗ್ಗಿದೆ ನನ್ನ ಮನಸ್ಸು
ನಿನ್ನ ನಾಟಕೀಯ
ಮಾತುಗಳ ಅರಿಯದೇ
ದಿಕ್ಕಿಲ್ಲದೆ
ಕುಗ್ಗಿದೆ ನನ್ನ ಮನಸ್ಸು
ಸೋತು ಬಿದ್ದೇನೆ ದಾರಿ
ಕಾಣದ ಜೀವನದೊಳಗೆ
-ರತ್ನಾ
ಹೊನ್ನನಾಯಕನಹಳ್ಳಿ