ಹರಪನಹಳ್ಳಿ ತಾಲೂಕಿನ ಜನ ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹರಪನಹಳ್ಳಿ ತಾಲೂಕಿನ ಐಇಸಿ ಸಂಯೋಜಕರಾದ ವಸಿಗೇರಪ್ಪ ಚಾಗನೂರು ತಿಳಿಸಿದರು.
ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮದ ಯಲ್ಲಪ್ನರ ಶಿವಣ್ಣನ ಹೊಲದ ಹತ್ತಿರ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಯಲ್ಲಿ ತೂಡಗಿಸಿ ಕಾರ್ಮಿಕರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ರೋಜಗಾರ್ ದಿವಸ್ ಆಚರಿಸಿ ಮಾತನಾಡಿ, ಗ್ರಾಮದ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಹೇಳಿದರು. ವೈಯಕ್ತಿಕ ಕಾಮಗಾರಿಗಳಾದ ದನದ ಶೆಡ್, ಮೀನು ಸಾಕಾಣಿಕೆ, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಕುರಿ, ಮೇಕೆ ಶೆಡ್, ಬಚ್ಚಲು ಇಂಗು ಗುಂಡಿ ಸೌಕರ್ಯ ಪಡೆದುಕೊಳ್ಳಬೇಕೆಂದರು.
ಇಂಜಿನಿಯರ್ ರವಿ ಮಾತನಾಡಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿ ಪ್ರತಿದಿನ 309ರೂ. ಕೂಲಿ ಪಡೆದು ತಮ್ಮ ತಮ್ಮ ಗ್ರಾಮಗಳಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು.
ಪಿಡಿಒ ಹಾಲಪ್ಪ ಮಾತನಾಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಹಾಯವಾಗಲೆಂದು ಸರಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಉದ್ಯೋಗ ಬಯಸುವವರು ಗ್ರಾಮ ಪಂಚಾಯತಿ ಕಚೇರಿಗೆ ಅಗತ್ಯ ದಾಖಲೆಗಳಾದ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಭಾವಚಿತ್ರವುಳ್ಳ ವಿವರಗಳನ್ನು ಸಲ್ಲಿಸಿದ್ದಲ್ಲಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುವದಕ್ಕೆ ಸಹಕಾರಿಯಾಗಲಿದೆಂದರು.
ಈ ಸಂದರ್ಭದಲ್ಲಿ ಎಡಿ ಹೇಮುದ್ರಿ ನಾಯ್ಕ, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಡಿಇಓ ಸುರೇಶ,ದ್ಯಾಮನಗೌಡ, ಬಿಪಟಿ ವಿಜಯ, ಮೇಟಿ ಮಂಜುನಾಥ, ಶೀರನಹಳ್ಳಿ ದಕ್ಷಿಣಮೂರ್ತಿ, ಕಾಯಕಮಿತ್ರರು, ಕೂಲಿ ಕಾರ್ಮಿಕರು ಇದ್ದರು.