ಇಂದು ಶನಿವಾರ ಸಿಂಧನೂರಿನ ಪರಿಸರ ಪ್ರೇಮಿಗಳು, ಬಡಮಕ್ಕಳ ಆಶಾಕಿರಣ,ಬಸವ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ.ಕೆ.ದೊಡ್ಡಬಸವ ಅವರ ಬಡಮಕ್ಕಳ ವೈದ್ಯಕೀಯ ಸೇವೆ ಗುರುತಿಸಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ ಬಸವ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ.ಕೆ.ದೊಡ್ಡಬಸವ ಅವರು ತಮ್ಮ ಆಸ್ಪತ್ರೆಗೆ ಬಂದಂತಹ ಅತ್ಯಂತ ಕಡುಬಡತನದಲ್ಲಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವರು,ಮತ್ತು ತುರ್ತು ಪರಿಸ್ಥಿತಿಯಲ್ಲಿ ಕೂಡ ಬಹಳ ಬೇಗ ಸ್ಪಂದಿಸಿ ಸಿಂಧನೂರು ತಾಲೂಕಿನಾದ್ಯಂತ ಹಲವಾರು ಮಕ್ಕಳ ಜೀವವನ್ನು ಉಳಿಸುವಲ್ಲಿ ಅವರ ಸೇವೆ ಅಪಾರವಾದದ್ದು,ಇತ್ತೀಚಿಗೆ ವನಸಿರಿ ತಂಡ ಪ್ರಜ್ಞೆ ತಪ್ಪಿದ ಮಗುವನ್ನು ಕರೆದುಕೊಂಡು ಬಂದು ಇದೇ ಆಸ್ಪತ್ರೆಯಲ್ಲಿ ಸೇರಿಸಿದಾಗ ಇಲ್ಲಿನ ವೈದ್ಯರಾದ ಡಾ.ಕೆ.ದೊಡ್ಡಬಸವ ಅವರು ಆ ಮಗುವನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಕಡಿಮೆ ಇಂದು ಈ ಬಸವ ಆಸ್ಪತ್ರೆಗೆ ಬಂದು ಅವರ ಈ ವೈದ್ಯಕೀಯ ಸೇವೆಗೆ ಮನಸೋತು ನಾವು ಸನ್ಮಾನಿಸಿ ಗೌರವಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ,ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ,ಸದಸ್ಯರಾದ ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ,ದೇವರಾಜ ವಿಶ್ವಕರ್ಮ ಇನ್ನಿತರರು ಉಪಸ್ಥಿತರಿದ್ದರು.