ಯಾದಗಿರಿ ಜಿಲ್ಲೆಯ ಸೈದಾಪೂರ ಸಮೀಪದ ಗುರುಮಠಕಲ್ ಮತಕ್ಷೇತ್ರದ ಮಾದ್ವಾರ ಗ್ರಾಮದಲ್ಲಿ ಹಲವಾರು ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಶರಣಪ್ಪ ಡಿ. ಮಾನೇಗಾರರವರು ಮಾತನಾಡಿ, ನಮಗೆ ನೀವು ಕೈ ಬೆಂಬಲ ಕೊಟ್ಟು,ಮುಂದಿನ ಅತ್ಯುತ್ತಮ ನಾಯಕನನ್ನು ನೀವೇ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಜನರ ಹಿತ ಮತ್ತು ಹೇಳಿಗೆಗಾಗಿ ಉಪಯೋಗಿಸಿಕೊಳ್ಳವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಶರಣಪ್ಪ ಮಟ್ಟುರ್,ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬಸ್ಸರೆಡ್ಡಿ ಅನುಪುರ್,ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮರೀಗೌಡ ಹುಲಕಲ,ಕಾಂಗ್ರೇಸ್ ಹಿರಿಯ ಮುಖಂಡ ಸಾಯಿಬಣ್ಣ ಬೋರಬಂಡ,ಕೆಪಿಸಿಸಿ ರಾಜ್ಯ ಸದಸ್ಯ ಶರಣಪ್ಪ ಮಾನೇಗಾರ,ಶ್ರಣಿಕಕುಮಾರ ಧೋಕಾ, ಚಿದಾನಂದಪ್ಪ ಕಾಳಬೆಳಗುಂದಿ,ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವನಾಥ್ ನೀಲಹಳ್ಳಿ, ಎನ್.ಎಸ್.ಯು.ಐ.ಜಿಲ್ಲಾ ಅಧ್ಯಕ್ಷ ಹೊನ್ನೇಶ್ ದೊಡ್ಡಮನಿ,ಕ್ರಿಷ್ಣ ಚಪ್ಪೆಟಲ್,ಕಾಶಪ್ಪ ಚಿನ್ನಾಕರ, ವಿಜಯ ಕಂದಳ್ಳಿ,ತಿಮ್ಮಾರೆಡ್ಡಿ ಬೆಳಗುಂದಿ,ಪುಂಡಲೀಕ ಗೊಂದಡಗಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.