ಸಕ್ಕರೆ ಬೆಲ್ಲನಂಗ ನನ್ನವ್ವ ಕರೀತಾಳೆ
ಸಿಹಿಯಾದ ಮಾತಿನಲ್ಲಿ ಮಾತನಾಡುತ್ತಾಳೆ
ನನ್ನಲ್ಲಿರುವ ಅಂಧಕಾರವನ್ನು ತೊಲಗಿಸ್ತಾಳೆ
ನನ್ನವ್ವ ಹಡೆದವ್ವ
ಅಮ್ಮನ ಪ್ರೀತಿ ಅಪ್ಪುಗೆಯ ಮಮತೆ
ನನ್ನವ್ವ ತಾಯಿ ಮಡಿಲಿನಲ್ಲಿನಾ ಕಾಣೆ
ಲಲನೆ ಪಾಲನೆ ಪೋಷಣೆ ಮಾಡುತ
ಜ್ವಾಕಿ ಜತನ ಮಾಡಿದಳು
ನನ್ನವ್ವ ಹಡೆದವ್ವ
ಏಳು ಸುತ್ತಿನ ಕೋಟೆಯ
ಸುತ್ತಿ ನಾ ಬಂದೆ,
ಅಕ್ಕರೆಯ ಮಮತೆಯ ಮನದಿಂದ
ಮನೆ ಕಡೆ ಸೆಳೆದಳು ನನ್ನನ್ನು
ನನ್ನವ್ವ ಹಡೆದವ್ವ
ತಾಯಿಯ ಪ್ರೀತಿ ತಂದೆಯ ಮಮತೆ
ಪ್ರತಿಕ್ಷಣದಲ್ಲೂ ನನ್ನ ಹೃದಯ
ಬಡಿತದಲ್ಲಿ ಬಿಂಬಿತವಾಗಿ ಉಳಿದಿದೆ
ನನ್ನ ಕನಸು ನನಸವಾಗಿ
ಜಗಜ್ಯೋತಿ ಬೆಳಗಿತು
ನನ್ನ ಕನಸು ನನಸಾಗಿ
ಎಷ್ಟು ಚಂದ ನೋಡು
ಸೂರ್ಯ ಚಂದಿರ ಇರುವವರೆಗೂ
ನನ್ನವ್ವ ನನ್ನ ಮನದಲ್ಲಿ ಮನೆ ಮಾಡಿದಳು
ನನ್ನವ್ವ ಹಡೆದವ್ವ
-ಮಹಾಂತೇಶ ಖೈನೂರ