ಕಾರಟಗಿ : ರೈತ ದಿನಾಚರಣೆಯ ಅಂಗವಾಗಿ ರೈತರೊಂದಿಗೆ ಕೆಸರಿನೊಳಗಿಳಿದು ಭತ್ತ ನಾಟಿ ಮಾಡುವ ಮೂಲಕ ಪಟ್ಟಣದ ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳು ನೋಡುಗರ ಗಮನ ಸೆಳೆದರು.
ಯಾವುದೇ ಒಂದು ದೇಶ ಸುಭದ್ರವಾಗಿರಬೇಕಾದರೆ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ದೇಶವನ್ನು ಕಾಯುವ ಸೈನಿಕ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅದರಂತೆ ರೈತ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ರೈತರ ಕಷ್ಟ ದುಃಖಗಳ ಕುರಿತು ನೆನಪಿಸುವ ನಿಟ್ಟಿನಲ್ಲಿ ಮಕ್ಕಳನ್ನೇ ಗದ್ದೆಗೆ ಇಳಿಸಿ ಭತ್ತ ನಾಟಿ ಮಾಡಿಸಿ ಈ ಮೂಲಕ ರೈತರಿಗೆ ಗೌರವ ಸಮರ್ಪಿಸಲಾಯಿತು ಎಂದು ಶಾಲಾ ಮುಖ್ಯಸ್ಥೆ ಶಾರದಾ ಮಲ್ಲಿಕಾರ್ಜುನ ಹೇಳಿದರು.
ನಮ್ಮ ಭಾಗದಲ್ಲಿ ಭತ್ತ ನಾಟಿ ಕಾರ್ಯವು ಭರದಿಂದ ಜರುಗುತ್ತಿದ್ದು, ರೈತ ದೇಶದ ಬೆನ್ನೆಲುಬು ರೈತನಿಗೆ ಗೌರವ ಸಮರ್ಪಿಸ ಬೇಕಾಗಿರುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಅಗತ್ಯ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಬೆಳೆಯುವ ಮಕ್ಕಳಲ್ಲಿ ರೈತನಿಗೆ ಗೌರವ ಸಲ್ಲಿಸುವ ಜ್ಞಾನ ತಿಳಿಯುತ್ತದೆ. ಅನ್ನದಾತನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ರೀತಿಯ ವಿನೂತನ ಕಾರ್ಯಕ್ರಮವನ್ನು ನಮ್ಮ ಶಾಲೆಯ ವತಿಯಿಂದ ಆಯೋಜನೆ ಮಾಡಲಾಗಿದೆ. ಇದಕ್ಕೆ ಸರ್ವ ಪಾಲಕರ ಸಹಮತಿ ಹಾಗೂ ರೈತ ವರ್ಗದ ಮೆಚ್ಚುಗೆಯಾಗಿದೆ ಎಂದು ತಿಳಿಸಿದರು.
ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧ ದೇಶದ ಎರಡು ಕಣ್ಣುಗಳಿದ್ದಂತೆ ಅವರಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ನಮ್ಮ ಶಾಲೆಯ ವತಿಯಿಂದ ವಿನೋತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾಗುತ್ತದೆ. ನಮ್ಮ ಶಾಲೆಯ ವತಿಯಿಂದ ರೈತ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
- ಮಲ್ಲಿಕಾರ್ಜುನ ತೊಂಡಿಹಾಳ
ಮುಖ್ಯಸ್ಥರು ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ಕಾರಟಗಿ.