ಹುಣಸಗಿ/ಸುರಪುರದ ಜನಪ್ರಿಯ ಶಾಸಕರಾದ ರಾಜೂಗೌಡ ಮತ್ತು ಅವರ ಅಚ್ಚು ಮೆಚ್ಚಿನ ಸಹೋದರರಾದ ಶ್ರೀಬಬ್ಲೂಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಸುರಪುರದ ಶಾಸಕರಾದ
ಶ್ರೀಯುತ ರಾಜೂಗೌಡ ಅವರ ತಾಯಿ ತಿಮ್ಮಮ್ಮ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್( ರಿ) ಕೊಡೇಕಲ್ ವತಿಯಿಂದ ಹುಣಸಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ನುರಿತ ತಜ್ಞ ವೈದ್ಯರುಗಳು ಭಾಗವಹಿಸಿದರು. ಎ.ಎಸ್. ಎಮ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಕಲಬುರ್ಗಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು ಮತ್ತು ಬೋರೋಕೊ ನೇತ್ರಾಲಯ ಕಲಬುರಗಿ ಇವರಿಂದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ದೇವರ ಸ್ವರೂಪಿಗಳಾದ ವೈದ್ಯರು ಗಳಿಗೆ ಗೌರವ ಸನ್ಮಾನ ಮಾಡಿದ ನಂತರ ಬಬ್ಲೂ ಗೌಡರಿಗೆ ಕೇಕ್ ಕತ್ತರಿಸುವ ಮುಖಾಂತರ ಜನ್ಮ ದಿನವನ್ನು ಆಚರಿಸಲಾಯಿತು ಬಬ್ಲೂ ಗೌಡ ಮತ್ತು ರಾಜುಗೌಡರಿಗೆ ಎಲ್ಲರೂ ಶುಭಾಶಯ ಕೋರಿದರು.ನಂತರ ಉಚಿತ ಆರೋಗ್ಯ ಶಿಭಿರಕ್ಕೆ ಚಾಲನೆ ನೀಡಲಾಯಿತು ತಮ್ಮನ ಹುಟ್ಟುಹಬ್ಬದ ಕುರಿತು ಅಣ್ಣನಾದ ಶ್ರೀಯುತ ರಾಜೂಗೌಡ ಅವರು ತುಂಬಾ ಮನತುಂಬಿ ಶುಭಾಶಯ ಕೋರಿ ಮಾತನಾಡಿದ ಅವರು ಅಣ್ಣ,ತಮ್ಮಂದಿರು ಇದ್ದರೆ ರಾಜೂಗೌಡ ಮತ್ತು ಬಬ್ಲೂ ಗೌಡ ಅವರ ತರಹ ಇರಬೇಕು ಅನ್ನುವ ಹಾಗೆ ಸಮಾಜಕ್ಕೆ ಒಂದು ಕಿವಿ ಮಾತು ಹೇಳಿದರು ಅಂದರೆ ಅವರ ನೋಡಿದ ಜನರು ನೀವು ರಾಮ ಲಕ್ಷ್ಮಣರ ತರಹ ಇದ್ದೀರಿ ಅಂತಿದ್ರು ಆದ್ರೆ ರಾಜು ಗೌಡ ಅವರು ಅವರ ಸಹೋದರರ ಕುರಿತು ನಾನು ರಾಮನ ತರಹ ಇದ್ದಿನೋ ಇಲ್ಲ ಗೊತ್ತಿಲ್ಲ. ಆದ್ರೆ ನನ್ನ ತಮ್ಮ ನನಗೆ ಲಕ್ಷ್ಮಣನಿಗಿಂತ ಒಂದು ಪಟ್ಟು ಹೆಚ್ಚು ಇದ್ದಾನೆ.ಇಂತಹ ತಮ್ಮನನ್ನು ಪಡೆದ ನಾನೇ ಪುಣ್ಯವಂತ ಎಂದು ಹೇಳಿದರು.ಈಗಿನ ಕಾಲದಲ್ಲಿ ಹೊಲ,ಮನೆಗಳಿಗಾಗಿ ಅಣ್ಣ ತಮ್ಮಂದಿರು ಹೊಡೆದಾಡಿ ದೂರಾಗುವಂತ ಕಾಲದಲ್ಲಿ ನನ್ನ ತಮ್ಮ ತನ್ನ ಇಡೀ ಸರ್ವಸ್ವವನ್ನೆ ಅಣ್ಣನಿಗಾಗಿ ಮುಡಿಪಾಗಿಟ್ಟು ಜೀವಿಸುತ್ತಿದ್ದಾರೆ ಎಂದು ಹೇಳಿದರು ನನ್ನ ಹುಟ್ಟು ಹಬ್ಬ ಮತ್ತು ನನ್ನ ತಮ್ಮನ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದೇವೆ ತಮ್ಮನ ಹುಟ್ಟು ಹಬ್ಬದ ದಿನ ಹುಣಸಗಿಯಲ್ಲಿ ಉಚಿತ ಶಿಬಿರ ಮಾಡಿ ಮತ್ತು 27 ಕ್ಕೇ ಶ್ರೀ ರಾಜೂಗೌಡರ ಹುಟ್ಟು ಹಬ್ಬದ ಪ್ರಯುಕ್ತ ಸುರಪುರದಲ್ಲಿ ಕೂಡ ಉಚಿತ ಶಿಬಿರ ಮಾಡಲಾಗುತ್ತದೆ ಅಲ್ಲಿ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಜನ ಸೇವೆಯೇ ಜನಾರ್ದನ ಸೇವೆ ಅನ್ನುವ ಹಾಗೆ ನಾನು ನನ್ನ ಕ್ಷೇತ್ರದ ಜನತೆಗಾಗಿ ಹಗಲಿರುಳು ಸೇವೆ ಮಾಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲವಾರು ವೈದ್ಯರು ರಾಜು ಗೌಡ ಮತ್ತು ಅವರ ಸಹೋದರರಿಗೆ ಶುಭಾಶಯ ಕೋರಿದರು. ಈ ಶಿಬಿರದಲ್ಲಿ 500 ಕ್ಕೂ ಹೆಚ್ಚು ರೋಗಿಗಳು ಭಾಗಿಯಾಗಿದ್ದರು ಮತ್ತು ಈ ಸುಂದರ ಕಾರ್ಯಕ್ರಮದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.