ಹನೂರು: ಎಲ್ಲೇ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ, ಆರ್ ನರೇಂದ್ರ ಭೂಮಿ ಪೂಜೆ ನೆರವೇರಿಸಿದರು,
ಇದೆ ವೇಳೆ ಮಾತನಾಡಿದ ಅವರು ಸುಮಾರು 1ಕೋಟಿ ರೂ ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ,ತಾಲೂಕಿನ ಎಲ್ಲೇ ಮಾಳ ಗ್ರಾಮದಲ್ಲಿ ಭೂ ಸೇನಾ ಇಲಾಖೆ ಯ ವತಿಯಿಂದ ಸುಮಾರು 20ಲಕ್ಷ ರೂ ವೆಚ್ಚದಲ್ಲಿ ಹಾಗೂ ಕೆ ವಿ ಏನ್ ದೊಡ್ಡಿ ಗ್ರಾಮದಲ್ಲಿ 20ಲಕ್ಷ ರೂ ಹಾಗೂ ಚಂಗ ವಾಡಿ ಗ್ರಾಮದಲ್ಲಿ 15ಲಕ್ಷ ರೂ ವೆಚ್ಚದ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು ಹಾಗೂ ಸುಮಾರು 45ಲಕ್ಷ ರೂ ವೆಚ್ಚದಲ್ಲಿ ವೈಶಂ ಪಾಳ್ಯ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು, ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಸುಮಾರು 1ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು, ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು
, ಮುಂದಿನ ದಿನಗಳಲ್ಲಿ ಬಂಡಳ್ಳಿ ಯಿಂದ ತೆಳ್ಳನೂರು ಗ್ರಾಮಕ್ಕೆ ತೆರಳುವ ರಸ್ತೆ ದುರಸ್ಥಿ ಗೊಳಿಸಲು ಸುಮಾರು 7.50ಕೋಟಿ ರೂ ವೆಚ್ಚದ ಕಾಮಗಾರಿ ಹಾಗೂ ಮಾರ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿದಿರಳ್ಳಿ ಗ್ರಾಮದಿಂದ ಮಾರ್ಟಳ್ಳಿ ಗ್ರಾಮ ದವರೆಗೆ ಸುಮಾರು 4.50ಕೋಟಿ ವೆಚ್ಚದಲ್ಲಿ ಕಾಮಗಾರಿಗೆಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು,
ಈ ಸಂದರ್ಭದಲ್ಲಿ ಎಲ್ಲೇ ಮಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ , ಜಯ ಲಕ್ಷ್ಮಿ. ನಾಗೇಶ, ಪಂ ಉಪಾಧ್ಯಕ್ಷ ಗಿರೀಶ್ ಕುಮಾರ್, , ಸದಸ್ಯರಾದ ಮಂಜುಳಾ, ಸುಹೇಲ್ ಖಾನ್, ರಮೇಶ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜು, ಕಾಂಗ್ರೆಸ್ ಮುಖಂಡರುಗಳಾದ, ನಾಗರಾಜು ನಾಗೇಶ್,, ಮಹದೇವು, ರಾಚಪ್ಪ, ಸಿದ್ದರಾಜು, ಬೈ ರಾಜ್, ಆರ್ ಮಹಾದೇವ, ಸೇರಿದಂತೆ ಇತರರು ಹಾಜರಿದ್ದರು.