ಆರೋಗ್ಯಕರ ವಾತಾವರಣಕ್ಕೆ ಮುಂದಾಗಿ: ಕೃಷ್ಣಮೂರ್ತಿ.ಟಿ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಅಂಗನವಾಡಿಗೆ ಬರುವ ಪುಟಾಣಿಗಳ ವಿದ್ಯಾಭ್ಯಾಸ ನೀಡುವ ಜೊತಗೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಮುಂದಾಗಿ ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ.ಟಿ. ರವರು ಹೇಳಿದರು.
ತಾಲೂಕಿನ ಶ್ರೀರಾಮನಗರ ಗ್ರಾಮದ ಹತ್ತನೇ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗ್ರಾಮ ಪಂಚಾಯತಿಯಿಂದ ಶುಕ್ರವಾರದಂದು ಹಮ್ಮಿಕೊಳ್ಳಲಾದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಚಿಲುಮೆ ಭಾಗ-2 ಸ್ವಚ್ಛತಾ ಶುಕ್ರವಾರ ಶ್ರಮಧಾನದ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ಪ್ರತಿನಿತ್ಯ ಪುಟಾಣಿ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ,ಮಕ್ಕಳಿಗೆ ಕೈ ತೊಳಿಸುವ ವಿಧಾನ, ಇನ್ನಿತರ ಸ್ವಚ್ಛತೆ ಅಭ್ಯಾಸಗಳನ್ನು ಮಾಡಿಸಿ, ಸ್ವಚ್ಛತೆ ಒಂದು ದಿನಕ್ಕೆ ಸೀಮಿತವಾಗಿದೆ ಪ್ರತಿನಿತ್ಯ ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು.
ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ನಾಗೇಶ್ ಕುರಡಿ ಮಾತನಾಡಿ ಗ್ರಾಮೀಣ ಪ್ರದೇಶಗಳು ಸ್ವಚ್ಛವಾಗಲಿ,ಮಹಾತ್ಮ ಗಾಂಧೀಜಿಯವರ ಕನಸ್ಸು ನೆರವೇರಲಿ,ಗ್ರಾಮದ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯು ಇದೆ,ಸ್ವಚ್ಛತೆ ಗ್ರಾಮ ಪಂಚಾಯತಿಗೆ ಪ್ರತಿಯೊಬ್ಬರೂ ಸಹಕರಿಸಿ ಎಂದರು.
ನಂತರ ಶ್ರಮಾದಾನ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಭೋದಿಸಿ,ಅಂಗನವಾಡಿ ಸುತ್ತಮುತ್ತಲಿನ ಆವರಣದ ಸ್ವಚ್ಛತೆ ಶ್ರಮಧಾನ ಸ್ವಚ್ಛತೆ ಮಾಡಲಾಯಿತು ನಂತರ ಗ್ರಾಮ ಪಂಚಾಯತಿ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಎಸ್.ಹೆಚ್ ಜಿಲ್ಲಾ ಸಮಾಲೋಚಕಾರದ ಬಸಮ್ಮ ಹುಡೇದ್, ತಾಲೂಕು ಎಸ್.ಬಿ.ಎಂ ವಿಷಯ ನಿರ್ವಾಹಕ ಭೀಮಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ. ಶ್ರೀಲಕ್ಷ್ಮಿ, ಉಪಾಧ್ಯಕ್ಷರಾದ ರೆಡ್ಡಿ ವೀರರಾಜು, ಸದಸ್ಯರಾದ ಶ್ರೀಕೃಷ್ಣ, ಮೈಬೂಬು,ಪಿ.ರಾಮಕೃಷ್ಣ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವತ್ಸಲಾ, ಕಾರ್ಯದರ್ಶಿಗಳು, ಸಿಬ್ಬಂದಿಗಳು ಇದ್ದರು.