ಧಾರವಾಡ:ಜ.21.ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬ್ಯಾಕೋಡದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ಅಧ್ಯಕ್ಷರಾದ ಶ್ರೀ ಸಿದ್ರಾಮ ನಿಲಜಗಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಅಖಂಡ ಕರ್ನಾಟಕ ಸಾಧಕರ ಸಮಾವೇಶ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಶ್ರೀಲಕ್ಕಮ್ಮದೇವಿ ಕಲಾ ಪೋಷಕ ಸಂಘದ 5 ನೇ ವಾರ್ಷಿಕೋತ್ಸವ ಪ್ರಯುಕ್ತ ಈ ಸಮಯದಲ್ಲಿ ವಿವಿಧ ರೀತಿಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಈ ಸಭೆಯಲ್ಲಿ ಶ್ರೀ ಪರಮಪೂಜ್ಯ ಕೃಷ್ಣಾನಂದ ಮಹಾಸ್ವಾಮಿಗಳು ಪೂರ್ಣಾನಂದ ಮಠ ಮತ್ತಿಕಟ್ಟಿ,ಜಾಲಿಕಟ್ಟಿ ದಿವ್ಯ ಸಾನಿಧ್ಯ ವಹಿಸುವರು,ಉದ್ಘಾಟಕರಾಗಿ ಶ್ರೀ ಪರಮಪೂಜ್ಯ ಡಾ.ಬಸವರಾಜದೇವರು ಸ್ವಾಮಿಗಳು ಜಗದ್ಗುರು ರೇವಣಸಿದ್ಧೇಶ್ವರ ಮಹಾಮಠ ಮನ್ಸೂರ ಆಗಮಿಸುವರು,ಮುಖ್ಯ ಅತಿಥಿಗಳಾಗಿ ಶ್ರೀ ಮಹಾಂತೇಶ ಹಟ್ಟಿ,ಶ್ರೀ ಶ್ರೀನಿವಾಸ ಶಾಸ್ತ್ರಿ,ಡಾ ಎಸ್ ಎಸ್ ಪಾಟೀಲ್, ಶ್ರೀ ಮೃತ್ಯುಂಜಯ ವಸ್ತ್ರದ ಡಾ ಲಕ್ಷ್ಮಣ ಚೌಧರಿ,ಡಾ ಬಸವರಾಜ ಗವಿಮಠ,ಡಾ ಕೆಂಚಾನೂರ ಶಂಕರ, ಶ್ರೀ ಪ್ರಭು ರಂಗಾಪುರ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಅಚೀವಮೆಂಟ್ ಗ್ಲೋಬಲ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಮ್ಮ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮಾಡಲಾಗುವುದು.ಶ್ರೀಮತಿ ಡಾ ಜೆ ಎಮ್ ಬಾದಾಮಿ,ಸ್ವಾಗತಿಸುವರು ಡಾ ಸುಮಾ ಹಡಪದ ಪ್ರಾಸ್ತಾವಿಕವಾಗಿ ಭಾಷಣ ಮಾಡುವರು ಮತ್ತು ಸಂಪತಕುಮಾರ ಕಿಚಡಿ ನಿರೂಪಣೆ ಮಾಡಲಿದ್ದಾರೆ ಶ್ರೀರಾಜು ಪೂಜೇರಿ ಕಾರ್ಯದರ್ಶಿ ಉಪಸ್ಥಿತರಿರುವರು ಎಂದು ಸಂಘದ ಅಧ್ಯಕ್ಷರಾದ ಶ್ರೀ ಸಿದ್ರಾಮ ಎಮ್ ನಿಲಜಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
