ಯಾದಗಿರಿ: ಶಹಾಪುರ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಜಲ ಜೀವನ ಯೋಜನೆ ಅಡಿಯಲ್ಲಿ ೩೨ ಲಕ್ಷ ರೂಪಾಯಿ ಕಾಮಗಾರಿ ಉದ್ಘಾಟನೆ ಮಾಡಿ ಮಾತನಾಡಿದ ಜನಪ್ರಿಯ ನಾಯಕ ಶರಣಬಸಪ್ಪಗೌಡ ದರ್ಶನಾಪೂರ ಅವರು ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರುನ ನಳದ ಸಂಪರ್ಕ ಕಲ್ಪಿಸುವ ಯೋಜನೆಯಾಗಿದ್ದು.
ವಿರುಪಾಪುರ ಗ್ರಾಮದ ಸಿಸಿ ರಸ್ತೆಗಳು ಚರಂಡಿ ಕಾಮಗಾರಿಗಳು ಸುಸಜ್ಜಿತ ಶಾಲಾ ಕಟ್ಟಡಗಳಿಗೆ ಪುರಾ ಅಭಿವೃದ್ಧಿ ಪ್ರಯತ್ನ ಮಾಡಬೇಕಾಗಿದೆ.ಯಾದವ ಸಮುದಾಯದ ಹಿರಿಯ ಮುಖಂಡರಾದ ಸಾಹೇಬಣ್ಣ ಪುರ್ಲೆ ಅವರಿಗೆ ಮತ್ತು ಯಾದವ ಸಮಾಜಕ್ಕೆ ಮುಂದಿನ ದಿನಮಾನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡುವುದರೊಂದಿಗೆ ಯಾದವ ಸಮಾಜವನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ. ಎಂದು ಶರಣಬಸಪ್ಪಗೌಡ ದರ್ಶನಾಪೂರ ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರುಗಳಾದ ಬಸನಗೌಡ ಸುಬೇದಾರ್, ಶಿವಮಾಂತ ಚಂದಾಪುರ,ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಚಂದಪ್ಪ ಸೇರಿ ಯುವ ಮುಖಂಡರಾದ ಸಾಹೇಬಣ್ಣ ಪುರ್ಲೆ,ಪ್ರದೀಪ್ ಯಾದವ್,ಸೇರಿದಂತೆ ವಿರುಪಾಪುರ ಗ್ರಾಮದ ಹಿರಿಯರು ಹಾಗೂ ಗಣ್ಯರು ಯುವಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ವಿಶೇಷತೆ ಅಂದರೆ ಜನಪ್ರಿಯ ಶಾಸಕ ಶರಣಬಸಪ್ಪ ಗೌಡ ದರ್ಶನಪುರ ಅವರಿಗೆ ಗ್ರಾಮಿಣ ಜನತೆ ಕೃಷಿ ಸಾಂಸ್ಕೃತಿಯ ಪ್ರತೀಕವಾದ ಎತ್ತಿ ಬಂಡಿಯಲ್ಲಿ ಮೆರವಣಿಗೆಯ ಮೂಲಕ ಭವ್ಯ ಸ್ವಾಗತ ಕೋರಿದರು.
ವರದಿ-ರಾಜಶೇಖರ ಮಾಲಿ ಪಾಟೀಲ ಶಹಾಪುರ