ಯಾದಗಿರಿ: ಶಹಾಪುರ ನಗರದ ರಾಯಲ್ ಕನ್ವೆನ್ಷನ್ ಸಭಾಂಗಣ ನಡೆದ ಶಹಾಪುರ ಹಿತ ರಕ್ಷಣಾ ವತಿಯಿಂದ ಬೈಪಾಸ್ ರಸ್ತೆ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ. ಹಿರಿಯ ವಕೀಲರಾದ ಭಾಸ್ಕರರಾವ್ ಮೂಡಬೂಳ ಮಾತನಾಡಿದ.2016 ರಲ್ಲಿ ಅನುಮೋದನೆ ಆದ ರಸ್ತೆ ಹುಲಕಲ್,ಬೆನಕನಹಳ್ಳಿ,ಕೆನ್ನಾಕೋಳ್ಳುರ,ವಿಬೂತಿಹಳ್ಳಿ , ರಸ್ತಾಪುರ,ಕ್ರಾಸ್ ಸೀಮಾಂತರದಿಂದ ಇದು ಹೋಗುವ ರಸ್ತೆ ಕಾಮಗಾರಿ ರದ್ದು ಮಾಡಿರುವುದಕ್ಕೆ ನಾವುಗಳು ವಿರೋಧಿಸುತ್ತೇವೆ.ಈ ಹಿಂದೆ ಇದ್ದ ಬೈಪಾಸ್ ರಸ್ತೆ ಮುಂದುವರಿಸಿಕೊಂಡು ಹೋಗಬೇಕು. ಎಂದು ಶಹಾಪುರ ನಗರದ ಜನತೆಗೆ ಅನುಕೂಲ ಆಗುವಂತೆ ಮಾಡಿಕೊಡಬೇಕು ಎಂದು ಶಾಸಕರಿಗೆ ಮತ್ತು ಮಾಜಿ ಶಾಸಕರಿಗೆ ಕಿವಿಮಾತು ಹೇಳಿದರು.
ಬೈಪಾಸ್ ರಸ್ತೆ ಬದಲಾವಣೆ ಆದ ಕಾರಣದಿಂದ ಶಹಾಪುರ ನಗರದ ಜನತೆ ಹಾಗೂ ವ್ಯಾಪಾರಸ್ಥರು ಮತ್ತು ಬೀದಿ ವ್ಯಾಪಾರಿಗಳಿಂದ ಹಾಗೂ ಶಹಾಪುರ ಹಿತ ರಕ್ಷಣಾ ಸಮಿತಿ ವತಿಯಿಂದ ವಿರೋಧ ವ್ಯಕ್ತಪಡಿಸುತ್ತವೆ ಎಂದು ಹೇಳಿದರು ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ವಕೀಲರು ಸಂಘದ ವತಿಯಿಂದ ಸಭಾಂಗಣದಲ್ಲಿ ನಡೆದ ದಿನಾಂಕ ೨೧/೧/೨೦೨೩ ರಂದು ನಡೆದ ಸಭೆಗೆ ಆಗಮಿಸಿದ ಹಿರಿಯ ವಕೀಲರಾದ ಭಾಸ್ಕರರಾವ್ ಮೂಡಬೂಳ,ಬೌದ್ಧ ಸಾಹಿತಿಗಳಾದ ದೇವಿಂದ್ರ ಹೆಗಡೆ,ಸಾಲ್ಮೋನ್ ವಕೀಲರ ಸಂಘದ ಅಧ್ಯಕ್ಷರಾದ ಸಂತೋಷ ದೇಶಮುಖ್,ವಿಠಲ್ ವಗ್ಗಿ,ದಲಿತ ಮುಖಂಡರಾದ ಶಿವಪುತ್ರ , ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಎಸ್.ಖಾಲಿದ್, ಭೀಮಣ್ಣ ಶಖಾಪುರ, ನಾಗಣ್ಣ ಬಡಿಗೇರ್, ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ , ಮರೆಪ್ಪ ಜಾಲಿಮಿಂಚಿ , ಮತ್ತು ವ್ಯಾಪಾರಸ್ಥರು ಸಂಘ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ